ಕ್ರೀಡಾಪಟುಗಳಿಗೆ, ಸಿಬ್ಬಂದಿಗೆ ಕೋವಿಡ್‌ ಸೋಂಕು: ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಂದೂಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕ್ರೀಡಾಪಟುಗಳಿಗೆ ಕೋವಿಡ್‌ ಸೋಂಕು ತಗುಲುತ್ತಿರುವ ಹಿನ್ನೆಲೆಯಲ್ಲಿ ಇದೇ ತಿಂಗಳು ನಡೆಯಬೇಕಿದ್ದ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಂದೂಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಕೇವಲ ರಣಜಿ ಮಾತ್ರವಲ್ಲದೆ ಕರ್ನಲ್‌ ಸಿ.ಲೆ ನಾಯ್ಡು ಟ್ರೋಫಿ, ಸೀನಿಯರ್‌ ವುಮೆನ್‌ ಟಿ20 ಲೀಗ್‌ ಟೂರ್ನಿಗಳನ್ನು ಮುಂದೂಡಲಾಗಿದೆ ಎಂದು ಬಿಸಿಸಿಐ ನ ಕಾರ್ಯದರ್ಶಿ ಜಯ್‌ ಶಾ ತಿಳಿಸಿದ್ದಾರೆ.
2020ರಲ್ಲೂ ಕೋವಿಡ್‌ ಕಾರಣದಿಂದ ರಣಜಿ ಟ್ರೋಫಿ ಈ ಬಾರಿಯೂ ರದ್ದಾಗಿದೆ. ರಣಜಿ ಟ್ರೋಫಿ ಈ ತಿಂಗಳು ಆರಂಭವಾಗಬೇಕಿತ್ತು ಹಾಗೂ ಫ್ರೆಬ್ರವರಿಯಲ್ಲಿ ಇತರೆ ಟೂರ್ನಿಗಳನ್ನು ನಡೆಸಲು ತೀರ್ಮಾನಿಸಲಾಗಿತ್ತು.
ಆದರೆ ಆಟಗಾರರು, ಸಿಬ್ಬಂದಿ, ಅಧಿಕಾರಿಗಳಿಗೆ ಸೋಂಕು ತಗುಲುತ್ತಿರುವುದರಿಂದ ಈಗಿನ ಮೂರು ಟೂರ್ನಿಗಳನ್ನು ಮುಂದೂಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ ಕ್ರಿಕೆಟ್‌ ತಂಡದ ಬ್ಯಾಟರ್‌ ಅಭಿನವ್‌ ಮನೋಹರ್‌ ಗೆ ಕೋವಿಡ್‌ ದೃಢಪಟ್ಟಿದ್ದು, ಅವರೊಂದಿಗೆ ಅಭ್ಯಾಸದಲ್ಲಿ ಭಾಗಿಯಾದ ಇತರ 28 ಆಟಗಾರರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!