September 14, 2026
Monday, September 14, 2026
spot_img

ಅಫ್ಘಾನ್ ಸರಣಿಗೂ ಮುನ್ನ ಬಿಸಿಸಿಐ ಬಿಗ್ ಮೂವ್: ರೋಹಿತ್, ಹಾರ್ದಿಕ್‌ಗೆ ಫಿಟ್‌ನೆಸ್ ಟೆಸ್ಟ್ ಕಡ್ಡಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯ ಹಾಗೂ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ಕ್ರಿಕೆಟ್ ತಂಡ ಸಜ್ಜಾಗುತ್ತಿದೆ. ಬಿಸಿಸಿಐ ಈಗಾಗಲೇ ಎರಡೂ ಸರಣಿಗಳಿಗೆ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಆದರೆ, ತಂಡದ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರ ಆಟವು ಸಂಪೂರ್ಣವಾಗಿ ಅವರ ದೈಹಿಕ ಫಿಟ್‌ನೆಸ್ ಮೇಲೆಯೇ ನಿರ್ಧಾರಿತವಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಹಾರ್ದಿಕ್, ರೋಹಿತ್‌ಗೆ ಫಿಟ್‌ನೆಸ್ ಪರೀಕ್ಷೆ:

ಈ ಇಬ್ಬರೂ ಸ್ಟಾರ್ ಆಟಗಾರರ ಆರೋಗ್ಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಸಿಸಿಐ, ಇಬ್ಬರಿಗೂ ಬೆಂಗಳೂರಿನಲ್ಲಿರುವ ಬಿಸಿಸಿಐನ ‘ಸೆಂಟರ್ ಆಫ್ ಎಕ್ಸಲೆನ್ಸ್’ಗೆ ಭೇಟಿ ನೀಡಿ ಫಿಟ್‌ನೆಸ್ ಸಾಬೀತುಪಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಮೂಲಗಳ ಪ್ರಕಾರ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಒಂದು ವಾರಗಳ ಕಾಲ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಕಠಿಣ ತರಬೇತಿ ಹಾಗೂ ತಪಾಸಣೆಗೆ ಒಳಗಾಗಲಿದ್ದಾರೆ. ಆ ಬಳಿಕವಷ್ಟೇ ಅವರು ಅಫ್ಘಾನ್ ವಿರುದ್ಧದ ಏಕದಿನ ಸರಣಿಗೆ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಆದರೆ, ಕ್ಯಾಪ್ಟನ್ ರೋಹಿತ್ ಶರ್ಮಾ ಅವರ ಫಿಟ್‌ನೆಸ್ ಅಪ್‌ಡೇಟ್ ಕುರಿತು ಬಿಸಿಸಿಐ ಸದ್ಯಕ್ಕೆ ಯಾವುದೇ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !