ಬಟ್ಟೆಗಳನ್ನು ಶುಭ್ರವಾಗಿ ಮತ್ತು ಸುವಾಸನೆಯಿಂದ ಇಡಬೇಕಾದ ವಾಷಿಂಗ್ ಮಿಷನ್‌ನಿಂದಲೇ ಕೆಲವೊಮ್ಮೆ ಕೊಳಕು ವಾಸನೆ ಅಥವಾ ಬೂಷ್ಟು ಮಾದರಿಯ ದುರ್ವಾಸನೆ ಬರಲು ಶುರುವಾಗುತ್ತದೆ. ಈ ವಾಸನೆಯು ನಾವು ಒಗೆಯುವ ಬಟ್ಟೆಗಳಿಗೂ ಅಂಟಿಕೊಳ್ಳುತ್ತದೆ. ಅನೇಕರು ವಾಷಿಂಗ್ ಮಿಷನ್ ಅನ್ನು ಹೊರಗಿನಿಂದ ಮಾತ್ರ ಒರೆಸುತ್ತಾರೆ, ಆದರೆ ಅದರ ಒಳಭಾಗದಲ್ಲಿ ವಾಸನೆ ಬರಲು ಕಾರಣವಾಗುವ ಹಲವು ಅಂಶಗಳು ಅಡಗಿರುತ್ತವೆ. ವಾಷಿಂಗ್ ಮಿಷನ್ ವಾಸನೆ ಬರಲು ಮುಖ್ಯ ಕಾರಣಗಳು ಮತ್ತು ಅದನ್ನು ಹೋಗಲಾಡಿಸುವ ಸುಲಭ ಉಪಾಯಗಳ ಬಗ್ಗೆ ತಿಳಿಯೋಣ.
ಬಾಗಿಲನ್ನು ತಕ್ಷಣ ಮುಚ್ಚುವುದು:
ಬಟ್ಟೆ ಒಗೆದು ಮುಗಿದ ತಕ್ಷಣ ವಾಷಿಂಗ್ ಮಿಷನ್ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚುವುದು ದೊಡ್ಡ ತಪ್ಪು. ಒದ್ದೆಯಾದ ಡ್ರಮ್ ಒಳಗೆ ಗಾಳಿಯಾಡದೆ ಇದ್ದಾಗ ತೇವಾಂಶ ಹೆಚ್ಚಾಗಿ ಬೂಷ್ಟು ಮತ್ತು ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುತ್ತವೆ.
ಅತಿಯಾದ ಡಿಟರ್ಜೆಂಟ್ ಬಳಕೆ:
ಅಗತ್ಯಕ್ಕಿಂತ ಹೆಚ್ಚು ಸರ್ಫ್ ಪೌಡರ್ ಅಥವಾ ಲಿಕ್ವಿಡ್ ಬಳಸುವುದರಿಂದ, ಅದು ನೀರಿನಲ್ಲಿ ಸಂಪೂರ್ಣವಾಗಿ ಕರಗುವುದಿಲ್ಲ. ಈ ಸೋಪಿನ ಕಣಗಳು ರಬ್ಬರ್ ರಿಂಗ್ ಮತ್ತು ಡ್ರಮ್ ಗೋಡೆಗಳಿಗೆ ಅಂಟಿಕೊಂಡು ಕಾಲಕ್ರಮೇಣ ಕೊಳೆಯುತ್ತವೆ.
ಡ್ರೈನ್ ಫಿಲ್ಟರ್ ಬ್ಲಾಕ್ ಆಗುವುದು:
ಮಿಷನ್‌ನ ಕೆಳಭಾಗದಲ್ಲಿರುವ ಫಿಲ್ಟರ್‌ನಲ್ಲಿ ಬಟ್ಟೆಯಿಂದ ಬಂದ ದಾರ, ಕೂದಲು ಮತ್ತು ಕಸ ಶೇಖರಣೆಯಾಗಿ ನೀರು ನಿಲ್ಲುತ್ತದೆ. ಇದನ್ನು ದೀರ್ಘಕಾಲ ಕ್ಲೀನ್ ಮಾಡದಿದ್ದರೆ ತೀವ್ರ ದುರ್ವಾಸನೆ ಉಂಟಾಗುತ್ತದೆ.
ಒದ್ದೆ ಬಟ್ಟೆಗಳನ್ನು ದೀರ್ಘಕಾಲ ಬಿಡುವುದು:
ಬಟ್ಟೆ ಒಗೆದ ನಂತರ ಗಂಟೆಗಟ್ಟಲೆ ಅವುಗಳನ್ನು ಮಿಷನ್ ಒಳಗೇ ಬಿಡುವುದರಿಂದ ಬಟ್ಟೆ ಮತ್ತು ಮಿಷನ್ ಎರಡೂ ಕೆಟ್ಟ ವಾಸನೆ ಬರಲಾರಂಭಿಸುತ್ತವೆ.
ಇದನ್ನೂ ಓದಿ:
ದುರ್ವಾಸನೆ ನಿವಾರಿಸಲು ಸರಳ ಕ್ರಮಗಳು
ಬಟ್ಟೆ ಒಗೆದು ಮುಗಿದ ನಂತರ ಕನಿಷ್ಠ 1 ರಿಂದ 2 ಗಂಟೆಗಳ ಕಾಲ ಮಿಷನ್ ಬಾಗಿಲನ್ನು ಸ್ವಲ್ಪ ತೆರೆದಿಡಬೇಕು
ಖಾಲಿ ಮಿಷನ್‌ನ ಡ್ರಮ್ ಒಳಗೆ ಎರಡು ಕಪ್ ಬಿಳಿ ವಿನೆಗರ್ ಮತ್ತು ಅರ್ಧ ಕಪ್ ಬೇಕಿಂಗ್ ಸೋಡಾ ಹಾಕಿ. ನಂತರ ಮಿಷನ್ ಅನ್ನು ‘Hot Water’ ಅಥವಾ ‘Tub Clean’ ಮೋಡ್‌ನಲ್ಲಿ ರನ್ ಮಾಡದರೆ. ಇದು ಎಲ್ಲಾ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.
ವಿಶೇಷವಾಗಿ ಫ್ರಂಟ್ ಲೋಡ್ ಮಿಷನ್‌ಗಳ ಮುಂಭಾಗದ ರಬ್ಬರ್ ರಿಂಗ್‌ನಲ್ಲಿ ನೀರು ನಿಲ್ಲುತ್ತದೆ. ಬಟ್ಟೆ ತೆಗೆದ ತಕ್ಷಣ ಒಣ ಬಟ್ಟೆಯಿಂದ ಇದನ್ನು ಒರೆಸುವುದದು ಒಳ್ಳೆಯದು.
ಮಿಷನ್‌ನ ಕೆಳಭಾಗದಲ್ಲಿರುವ ಡ್ರೈನ್ ಫಿಲ್ಟರ್ ಅನ್ನು ಹೊರಗೆ ತೆಗೆದು, ಅದರಲ್ಲಿರುವ ಕಸವನ್ನು ನಿಯಮಿತವಾಗಿ ಕ್ಲೀನ್ ಮಾಡಬೇಕು.



