August 12, 2026
Wednesday, August 12, 2026
spot_img

Solution| ಕಿರಿಕಿರಿ ಉಂಟುಮಾಡುವ ಮೈ ಮೇಲಿನ ನರಹುಲಿಗೆ ಇಲ್ಲಿದೆ ಬೆಸ್ಟ್ ಮದ್ದು!

ಅನೇಕ ಜನರಿಗೆ ಕುತ್ತಿಗೆ, ಅಥವಾ ಮೈ ಮೇಲೆ ಸಣ್ಣ ಸಣ್ಣ ಮಾಂಸದ ಗಂಟುಗಳು ಅಥವಾ ಗುಳ್ಳೆಗಳು ಏಳುತ್ತವೆ. ಇದನ್ನು ಗ್ರಾಮೀಣ ಭಾಗದಲ್ಲಿ ‘ಚಿಮುಕಾಲು’ ಅಥವಾ ‘ನರಹುಲಿ’ ಎಂದು ಕರೆಯಲಾಗುತ್ತದೆ. ಇವುಗಳು ಯಾವುದೇ ನೋವು ಉಂಟುಮಾಡದಿದ್ದರೂ, ಕಿರಿಕಿರಿ ಉಂಟು ಮಾಡುತ್ತದೆ. ಇವುಗಳನ್ನು ಹೋಗಲಾಡಿಸಲು ಮನೆಯಲ್ಲೇ ಮಾಡಬಹುದಾದ ಕೆಲವು ಉಪಾಯಗಳ ಬಗ್ಗೆ ತಿಳಿಯೋಣ.

ಅಲೋವೆರಾ

ತಾಜಾ ಅಲೋವೆರಾ ಜೆಲ್ ಅನ್ನು ಪ್ರತಿದಿನ ಚಿಮುಕಾಲು ಇರುವ ಜಾಗಕ್ಕೆ ಹಚ್ಚಿ 30 ನಿಮಿಷ ಬಿಟ್ಟು ತೊಳೆಯಬೇಕು. ಇದರ ಆಸಿಡ್ ಗುಣವು ಚರ್ಮವನ್ನು ಸ್ವಚ್ಛಗೊಳಿಸಲು ನೆರವಾಗುತ್ತದೆ.

ಅರಿಶಿನ ಮತ್ತು ತೆಂಗಿನ ಎಣ್ಣೆ

ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿರುವ ಅರಿಶಿನಕ್ಕೆ ಸ್ವಲ್ಪ ತೆಂಗಿನ ಎಣ್ಣೆ ಸೇರಿಸಿ ಪೇಸ್ಟ್ ಮಾಡಿ, ದಿನಕ್ಕೆ ಎರಡು ಬಾರಿ ಹಚ್ಚುವುದರಿಂದ ಚರ್ಮದ ಕಿರಿಕಿರಿ ಕಡಿಮೆಯಾಗುತ್ತದೆ.

ಬೇವಿನ ಎಲೆಗಳು:

ಬೇವಿನ ಎಲೆಯನ್ನು ನುಣ್ಣಗೆ ರುಬ್ಬಿ ಚಿಮುಕಾಲುಗಳ ಮೇಲೆ ಹಚ್ಚುವುದರಿಂದ ಯಾವುದೇ ಸೋಂಕು ಹರಡುವುದಿಲ್ಲ.

ಬೆಳ್ಳುಳ್ಳಿ ಪೇಸ್ಟ್

ಬೆಳ್ಳುಳ್ಳಿ ಎಸಳುಗಳನ್ನು ಚೆನ್ನಾಗಿ ಜಜ್ಜಿ ಪೇಸ್ಟ್ ಮಾಡಿ, ಅದನ್ನು ಚಿಮುಕಾಲು ಮೇಲಷ್ಟೇ ಹಚ್ಚಿ ರಾತ್ರಿ ಇಡೀ ಬ್ಯಾಂಡೇಜ್ ಹಾಕಿ ಬಿಡಿ ಬೆಳಿಗ್ಗೆ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆದರೆ, ಬೆಳ್ಳುಳ್ಳಿಯಲ್ಲಿರುವ ಕಿಣ್ವಗಳು ಚರ್ಮದ ಗಂಟುಗಳನ್ನು ನೈಸರ್ಗಿಕವಾಗಿ ಕುಗ್ಗಿಸುತ್ತವೆ.

ಇದನ್ನೂ ಓದಿ:

ಎಚ್ಚರಿಕೆಗಳು

ಮೈ ಮೇಲಿರುವ ಚಿಮುಕಾಲುಗಳನ್ನು ಬಲವಂತವಾಗಿ ಉಗುರಿನಿಂದ ಚಿವುಟುವುದು ಅಥವಾ ಬ್ಲೇಡ್‌ನಿಂದ ಕತ್ತರಿಸಲು ಹೋಗಬಾರದು. ಇದರಿಂದ ಸೋಂಕು ಹೆಚ್ಚಾಗಬಹುದು.

ಪ್ರತಿದಿನ ಸ್ನಾನ ಮಾಡಿದ ನಂತರ ಚರ್ಮವನ್ನು ಸಂಪೂರ್ಣವಾಗಿ ಒಣಗಿಸಿಕೊಳ್ಳಬೇಕು. ಬೆವರಿನಿಂದಾಗಿ ಇವುಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !