ವಿಧಾನಸೌಧ ಮುಂಭಾಗದಲ್ಲೇ ಯುವಕ-ಯುವತಿಯರ ಬಿಯರ್ ಪಾರ್ಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ವಿಧಾನಸೌಧ ಮುಂಭಾಗದಲ್ಲೇ ನಾಲ್ವರು ಯುವಕರು, ಇಬ್ಬರು ಯುವತಿಯರು ಬಿಯರ್ ಕುಡಿದು, ಸಿಗರೇಟ್ ಸೇದಿ ಪಾರ್ಟಿ ಮಾಡಿರುವ ಘಟನೆ ನಡೆದಿದೆ.
ವಿಧಾನಸೌಧ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಪಾರ್ಕ್‍ನಲ್ಲಿ ಇಂದು ಮಧ್ಯಾಹ್ನ ನಾಲ್ವರು ಯುವಕರು, ಇಬ್ಬರು ಯುವತಿಯರ ಗ್ಯಾಂಗ್ ಕಾರಿನಿಂದ ಬಿಯರ್ ಬಾಟಲ್ ಓಪನ್ ಮಾಡಿ ಕುಡಿಯಲು ಮುಂದಾಗಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಆರು ಜನರನ್ನು ಬಿಯರ್ ಸಮೇತ ಹಿಡಿದು ಪೊಲೀಸ್ ಠಾಣೆಗೆ ಕರೆದೊಯ್ಯದರು. ಒಂದು ಕಡೆ ವಿಧಾನಸೌಧ, ಎದುರಿಗೆ ಪೊಲೀಸ್ ಠಾಣೆ, ಸುತ್ತಲೂ ಸರ್ಕಾರಿ ಕಚೇರಿಗಳು, ಕಾಲೇಜುಗಳು ಹೀಗಿದ್ರು ಹಾಡಹಗಲೇ ಈ ರೀತಿ ವರ್ತನೆ ತೋರಿಸಿದ ಯುವಕ-ಯುವತಿಯರ ವರ್ತನೆ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!