April 17, 2026
Friday, April 17, 2026
spot_img

25 ಮೆಂಬರ್ಸ್‌ ಜತೆ ಚಿಕ್ಕಮಗಳೂರು ಸಿಟಿಗೆ ಎಂಟ್ರಿ ಕೊಟ್ಟ ಬೀಟಮ್ಮ & ಗ್ಯಾಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

25 ಮೆಂಬರ್ಸ್‌ ಜತೆ ಚಿಕ್ಕಮಗಳೂರು ಸಿಟಿಗೆ ಬೀಟಮ್ಮ & ಗ್ಯಾಂಟ್‌ ಎಂಟ್ರಿ ಕೊಟ್ಟಿದೆ. ಇತ್ತೀಚೆಗಷ್ಟೇ ಬೀಟಮ್ಮ ಗ್ಯಾಂಗ್‌ನ ಆನೆಗಳು ಚಿಕ್ಕಮಗಳೂರು ಸಿಟಿಗೆ ಐದು ಕಿಲೋಮೀಟರ್‌ ದೂರದಲ್ಲಿ ಕಾಣಿಸಿಕೊಂಡಿದ್ದವು. ಆ ಐದು ಕಿ.ಮೀ ಕ್ರಮಿಸಿ ಇದೀಗ ಇಡೀ ಗ್ಯಾಂಗ್‌ ಸಿಟಿಗೆ ಬಂದಿದೆ.

ಕಾಫಿನಾಡು ಜಿಲ್ಲೆಗೆ ಒಂದು ವರ್ಷದ ನಂತರ ಗ್ಯಾಂಗ್​​​ ಎಂಟ್ರಿ ನೀಡಿದ್ದು, ಬೇಲೂರು ಮಾರ್ಗವಾಗಿ ಈ ಗ್ಯಾಂಗ್​​ ಮೂಡಿಗೆರೆ ತಾಲೂಕಿಗೆ ಎಂಟ್ರಿ ಆಗಿವೆ. ಜಿಲ್ಲೆಯ ಅಷ್ಟ ದಿಕ್ಕುಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ.

ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿ ವ್ಯಾಪ್ತಿಯಲ್ಲಿ 25 ಕಾಡಾನೆಗಳ ಟೀಮ್ ಸಂಚಾರ ನಡೆಸಿದ್ದು, ಬಾರದಹಳ್ಳಿ ಗ್ರಾಮದ ಸುತ್ತ ಮುತ್ತ ಓಡಾಟ ಮಾಡಿದೆ. ಮೂಡಿಗೆರೆ, ಚಿಕ್ಕಮಗಳೂರು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಅಲರ್ಟ್ ಆಗಿದ್ದು, ಕಾಫಿ ತೋಟದ ಕೆಲಸಕ್ಕೆ ‌ತೆರಳದಂತೆ ಕಾರ್ಮಿಕರಿಗೆ ಎಚ್ಚರಿಕೆ ನೀಡಲಾಗಿದೆ. ಸದ್ಯ ಮೂಡಿಗೆರೆ ತಾಲೂಕಿನ ಕಸ್ಕೆಬೈಲು ಗುಡ್ಡದಲ್ಲಿ 25 ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಬಾರದಹಳ್ಳಿ, ಚಟ್ಟನಹಳ್ಳಿ, ಕಲ್ಲು ಗುಡ್ಡ, ವಾಟೆಗಂಡಿ, ಹುಲಿಹಂಡ್ಲು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕ ಮನೆ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !