ಇಸ್ಲಾಂಗೆ ಮತಾಂತರ ಹೊಂದದಿದ್ದರೆ ಶಿರಚ್ಛೇದ: ಪತಿಗೆ ಪತ್ನಿಯ ಬೆದರಿಕೆ!

ದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯ ಶಹನವಾಜ್ ಪ್ರದೇಶದ ವ್ಯಕ್ತಿಯೊಬ್ಬರು ಮದುವೆಯಾಗಿ 12 ವರ್ಷಗಳ ಬಳಿಕ ತನ್ನ ಪತ್ನಿ ಹಿಂದು ಅಲ್ಲ ಮುಸ್ಲಿಂ ಎಂದು ತಿಳಿದಿದ್ದಾನೆ.
ಮದುವೆಯಾಗಿ 12 ವರ್ಷಗಳ ಬಳಿಕ ತನ್ನ ಪತ್ನಿ ಪೂಜಾ ಅಲ್ಲ ಹಸೀನಾ ಬಾನೊ ಎಂದು ತಿಳಿದು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಮೂಲಗಳ ಪ್ರಕಾರ ಜಗಬೀರ್ ಕೋರಿ ಮತ್ತು ಅವರ ಕುಟುಂಬವನ್ನು ಹಸೀನಾ ಎಂಬಾಕೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದು, ಮತಾಂತರ ಹೊಂದದಿದ್ದರೆ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ತಿಳಿದು ಬಂದಿದೆ.

ವರದಿಗಳ ಪ್ರಕಾರ, 12 ವರ್ಷಗಳ ಹಿಂದೆ ರೈಲ್ವೇ ನಿಲ್ದಾಣದಲ್ಲಿ ಅಸಹಾಯಕವಾಗಿ ನಿಂತಿರುವಾಗ ಪೂಜಾ ಅಲಿಯಾಸ್ ಹಸೀನಾಳನ್ನು ಜಗಬೀರ್ ಭೇಟಿಯಾಗಿ ಆಕೆಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಆಶ್ರಯವನ್ನು ನೀಡಿದ್ದನು. ಅಲ್ಲದೇ ಕೆಲ ಸಮಯದ ಬಳಿಕ ಇವಬ್ಬರೂ ಕೋರ್ಟ್‌ನಲ್ಲಿ ವಿವಾಹವಾಗಿದ್ದಾರೆ.
ತನ್ನ ಇಬ್ಬರು ಮಕ್ಕಳಿಗೆ ಹಸೀನ ಇಸ್ಲಾಂ ಧರ್ಮದ ಬೋಧನೆಯನ್ನು ಮಾಡುತ್ತಿರುವುದನ್ನು ಜಗಬೀರ್ ಕಂಡಿದ್ದಾನೆ. ಅಲ್ಲದೇ ಹಸೀನಾ ತನ್ನ ತವರು ಮನೆಗೆ ಹೋದಾಗ ಮಗನಿಗೆ ಇಸ್ಲಾಂ ಧರ್ಮದಲ್ಲಿ ಮಾಡುವ ಸುನ್ನತ್ ಕಾರ್ಯವನ್ನು ಮಾಡಿರುವುದನ್ನು ತಿಳಿದಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!