Friday, September 30, 2022

Latest Posts

ಹರತಾಳ ಹಿಂಸಾಚಾರ : ಕೆಎಸ್‌ಆರ್‌ಟಿಸಿಗೆ ಒಂದೇ ದಿನ ಬರೋಬ್ಬರಿ 50 ಲಕ್ಷ ರೂ. ನಷ್ಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಿಎಫ್‌ಐ ಸಂಘಟನೆಗೆ ಸೇರಿದ ಕಚೇರಿಗಳು, ಮುಖಂಡರ ಮನೆಗಳಿಗೆ ಎನ್‌ಐಎ, ಇಡಿ ದಾಳಿಯ ಬೆನ್ನಿಗೇ ಕೇರಳದಲ್ಲಿ ನೀಡಲಾದ ‘ಹರತಾಳ’ ಕರೆ ಸಂದರ್ಭ ಉಂಟಾದ ಹಿಂಸಾಚಾರಗಳಲ್ಲಿ ಒಂದೇ ದಿನ ಲಕ್ಷಂತರ ರೂ.ಗಳ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟಾಗಿದೆ.

ಹರತಾಳ ಸಂದರ್ಬದ ಹಿಂಸಾಚಾರದಿಂದಾಗಿ ಕೇರಳ ರಸ್ತೆ ಸಾರಿಗೆ ಸಂಸ್ಥೆಗೆ ಅತೀ ಹೆಚ್ಚು ನಷ್ಟವಾಗಿದ್ದು, ಕಲ್ಲು ತೂರಾಟದಿಂದಾಗಿ 70 ಬಸ್‌ಗಳು ಧಂಗೊಂಡಿವೆ. ದಕ್ಷಿಣ ವಲಯದಲ್ಲಿ 30, ಕೇಂದ್ರ ವಲಯದಲ್ಲಿ ೨೫ ಹಾಗೂ ಉತ್ತರ ವಲಯದಲ್ಲಿ 15 ಬಸ್‌ಗಳು ಜಖಂಗೊಂಡಿವೆ.

ಇನ್ನು ಹಿಂಸಾಚಾರದಲ್ಲಿ 11 ಮಂದಿ ಗಾಯಗೊಂಡಿದ್ದಾರೆ. ದಕ್ಷಿಣ ವಲಯದಲ್ಲಿ ಮೂವರು ಚಾಲಕರು, ಇಬ್ಬರು ನಿರ್ವಾಹಕರು, ಕೇಂದ್ರ ವಲಯದಲ್ಲಿ ಮೂವರು ಚಾಲಕರು ಮತ್ತು ಒಬ್ಬ ಪ್ರಯಾಣಿಕ ಮತ್ತು ಉತ್ತರ ವಲಯದಲ್ಲಿ ಇಬ್ಬರು ಚಾಲಕರು ಹಿಂಸಾಚಾರದಲ್ಲಿ ಗಾಯಗೊಂಡಿದ್ದಾರೆ. ಒಟ್ಟಾರೆಯಾಗಿ ಸಂಸ್ಥೆಗೆ 50 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಕೆಎಸ್‌ಆರ್‍ಟಿಸಿ ಮೂಲಗಳು ತಿಳಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!