ಹಿಜಾಬ್‌ ಪ್ರತಿಭಟನೆ ಮಧ್ಯೆ ಇರಾನ್‌ ನಲ್ಲಿ ಇಂಟರ್‌ನೆಟ್‌ ಸ್ಥಗಿತ: ಉಪಗ್ರಹಾಧಾರಿತ ಸ್ಟಾರ್‌ ಲಿಂಕ್‌ ಪ್ರಾರಂಭಿಸುತ್ತೇನೆಂದ ಎಲಾನ್‌ ಮಸ್ಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸ್ಪೇಸ್‌ ಎಕ್ಸ್‌ ಹಾಗೂ ಟೆಸ್ಲಾ ಮಾಲೀಕರಾಗಿರೋ ಎಲಾನ್‌ ಮಸ್ಕ್‌ ಇದೀಗ ಇರಾನ್‌ ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗಳ ನಡುವೆ ಇಂಟರ್ನೆಟ್ ಸ್ಥಗಿತದ ಮಧ್ಯೆ ಸ್ಟಾರ್‌ಲಿಂಕ್ ಎಂಬ ಉಪಗ್ರಹ ಇಂಟರ್ನೆಟ್ ಸೇವೆಯನ್ನು ಸಕ್ರಿಯಗೊಳಿಸುವುದಾಗಿ ಹೇಳಿದ್ದಾರೆ.

ಇರಾನಿಯನ್ನರಿಗೆ “ಇಂಟರ್ನೆಟ್ ಸ್ವಾತಂತ್ರ್ಯ ಮತ್ತು ಮಾಹಿತಿಯ ಮುಕ್ತ ಹರಿವನ್ನು ಹೆಚ್ಚಿಸಲು” ಯುಎಸ್ ಕ್ರಮ ಕೈಗೊಂಡಿದೆ ಎಂದು ಯುಎಸ್ ಉನ್ನತ ಶ್ರೇಣಿಯ ಅಧಿಕಾರಿಯೊಬ್ಬರು ಟ್ವೀಟ್‌ಗೆ ಮಸ್ಕ್ ಅವರು ಪ್ರತಿಕ್ರಿಯಿಸಿದ್ದು ಸ್ಟಾರ್‌ ಲಿಂಕ್‌ ಪ್ರಾರಂಭಿಸುವುದಾಗಿ ಹೇಳಿದ್ದಾರೆ.

ಇಸ್ಲಾಮಿಕ್ ಗಣರಾಜ್ಯದ ಪರಮಾಣು ಕಾರ್ಯಕ್ರಮದ ಮೇಲೆ ಯುಎಸ್ ನಿರ್ಬಂಧಗಳ ಹೊರತಾಗಿಯೂ ಇರಾನಿಯನ್ನರಿಗೆ ಇಂಟರ್ನೆಟ್ ಸೇವೆಗಳನ್ನು ವಿಸ್ತರಿಸಲು ಯುಎಸ್ ಸರ್ಕಾರ ಶುಕ್ರವಾರ ಮಾರ್ಗಸೂಚಿಗಳನ್ನು ನೀಡಿದೆ.

ನೈತಿಕತೆಯ ಪೊಲೀಸರಿಂದ ಬಂಧನಕ್ಕೊಳಗಾದ ಮಹಿಳೆಯ ಸಾವಿನ ಕೋಪವು ಇರಾನಿನಲ್ಲಿ ಪ್ರತಿಭಟನೆಯನ್ನು ಹೆಚ್ಚಿಸಿದ ನಂತರ ಬುಧವಾರ ದೇಶದಲ್ಲಿ ಉಳಿದುಕೊಂಡಿದ್ದ ಕೊನೆಯ ಸಾಮಾಜಿಕ ಜಾಲತಾಣಗಳಲ್ಲಿ Instagram ಮತ್ತು WhatsApp ಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಲಾನ್‌ ಮಸ್ಕ್‌ ಉಪಗ್ರಹ ಆಧರಿತ ಅಂತರ್ಜಾಲ ಸೇವೆಯನ್ನು ಪ್ರಾರಂಭಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!