ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಣ್ಣುಮಕ್ಕಳಿಗೆ ಸಾಮಾನ್ಯವಾಗಿ ಚಾಕೊಲೇಟ್ ಅಂದ್ರೆ ತುಂಬಾ ಇಷ್ಟ. ಆದರೆ ಈ ಡಾರ್ಕ್ ಚಾಕೊಲೇಟ್ ನಲ್ಲಿ ಸಿಹಿ ಅಂಶ ಇರೋದಿಲ್ಲ ಅಂತ ಮೂಗು ಮುರಿತಾರೆ. ನಿಮಗೂ ಕೂಡ ಡಾರ್ಕ್ ಚಾಕೊಲೇಟ್ ತಿನ್ನೋಕೆ ಇಷ್ಟ ಇಲ್ವಾ.. ಅದರಲ್ಲಿನ ಆರೋಗ್ಯಕರ ಗುಣಗಳ ಬಗ್ಗೆ ತಿಳಿದರೆ ನೀವೇ ಇಷ್ಟ ಪಟ್ಟು ತಿನ್ನುತ್ತೀರ..
- ಡಿಪ್ರೆಷನ್: ಇದರಲ್ಲಿನ ಥಿಯೋಬ್ರೋಮೈನ್ ಅಂಶ ಇರುವುದರಿಂದ ಡಿಪ್ರೆಷನ್ ನಿಂದ ಪಾರಾಗಬಹುದು.
- ಹೃದಯ: ಇದರಲ್ಲಿನ ಕೋಕೋ ಅಂಶವು ಹೃದಯ ಸಂಬಂಧಿ ಕಾಯಿಲೆಯಿಂದ ರಕ್ಷಿಸುತ್ತದೆ.
- ಮಧುಮೇಹ: ನಿಯಮಿತವಾದ ಡಾರ್ಕ್ ಚಾಕೊಲೇಟ್ ಸೇವಿಸುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರಲಿದೆ.
- ಕೊಲೆಸ್ಟ್ರಾಲ್: ಡಾರ್ಕ್ ಚಾಕೊಲೇಟ್ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಆಗುತ್ತದೆ.
- ರಕ್ತದೊತ್ತಡ: ಇದರಲ್ಲಿ ಕೊಕೊ ಅಂಶ ಹೆಚ್ಚಾಗಿರುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ.
- ಕೆಮ್ಮು: ಥಿಯೋಬ್ರೋಮೈನ್ ಹಾಗೂ ಕೊಕೊ ಅಂಶಗಳು ಕೆಮ್ಮಿನ ಸಮಸ್ಯೆಗೆ ಔಷಧವಾಗಲಿದೆ.
- ಮೆದುಳು: ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಮೆಮೋರಿ ಪವರ್, ದೃಷ್ಟಿ ಸೇರಿದಂತೆ ಹಲವು ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗಲಿದೆ.
- ತ್ವಚೆಗೆ ಕಾಂತಿ: ಬಿಸಿಲಿನಿಂದ ಕಾಡುವ ಅಲ್ಟ್ರ ವಯೋಲೆಂಟ್ ರೇಸ್ ನಿಂದ ತ್ವಚೆಯನ್ನು ರಕ್ಷಿಸುತ್ತದೆ.