October 10, 2026
Saturday, October 10, 2026
spot_img

ಬೆಂಗಳೂರಿನ ನಾಗರಬಾವಿ ಬಳಿಯ ಹೊಟೇಲ್‌ನಲ್ಲಿ ಸ್ಫೋಟ: ವ್ಯಕ್ತಿ ಸಾ*ವು, ನಾಲ್ವರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೆಂಗಳೂರಿನ ನಗರಬಾವಿಯ ರಿಂಗ್‌ ರೋಡ್‌ ಬಳಿಯ ಸರ್ವಿಸ್‌ ರಸ್ತೆಯಲ್ಲಿ ಹೊಟೇಲ್‌ಗೆ ಬೆಂಕಿ ತಗುಲಿದ್ದು, ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ.

ತಡರಾತ್ರಿ ಖಾಸಗಿ ಹೊಟೇಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಡರಾತ್ರಿ ಹೊಟೇಲ್‌ನಲ್ಲಿಯೇ ಇದ್ದು, ಮರುದಿನದ ಅಡುಗೆಗೆ ತಯಾರಿ ನಡೆಸುತ್ತಿದ್ದರು ಎನ್ನಲಾಗಿದೆ.

ಹೊಟೇಲ್‌ನ ಇನ್ನೊಂದು ಮಹಡಿಯಲ್ಲಿ ಸಿಬ್ಬಂದಿ ವಾಸವಾಗಿದ್ದರು. ಬೆಂಕಿ ಅವರ ಮಹಡಿಗೂ ಹಬ್ಬಿದೆ. ಇದರಿಂದ ಗಾಬರಿಯಾದ ಸಿಬ್ಬಂದಿ ಬೇಗನೆ ಕೆಳಕ್ಕೆ ಇಳಿದುಬರುವ ಪ್ರಯತ್ನ ಮಾಡಿದ್ದಾರೆ. ಅಷ್ಟರಲ್ಲಿ ಬೆಂಕಿ ಎಲ್ಲೆಡೆ ಆವರಿಸಿದೆ.

ದಟ್ಟ ಹೊಗೆಯಲ್ಲಿ ಉಸಿರಾಡಲಾಗದೆ ಐದು ಮಂದಿ ಅಸ್ವಸ್ಥರಾಗಿದ್ದಾರೆ. 45 ವರ್ಷದ ರಾಜ್‌ಕುಮಾರ್‌ ಮೃತರು. ಮೂರು ಜನ ಪಾರಾಗಿದ್ದಾರೆ. ಶಾರ್ಟ್‌ ಸರ್ಕೀಟ್‌ನಿಂದ ಬೆಂಕಿ ಹೊತ್ತಿರುವ ಶಂಕೆ ವ್ಯಕ್ತವಾಗಿದೆ.

Must Read