Sunday, February 5, 2023

Latest Posts

ಬೆಂಗಳೂರಿನ ರಸ್ತೆ ಅಪಘಾತ: ಪ್ರತ್ಯೇಕ ಎರಡು FIR ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬೆಂಗಳೂರಿನ ಮಾಗಡಿ ರೋಡ್ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಿಟ್ ಅಂಡ್ ರನ್ ಪ್ರಕರಣ ಸಂಬಂಧ ಪ್ರತ್ಯೇಕ ಎಫ್‌ಐಆರ್ (FIR ) ದಾಖಲಿಸಲಾಗಿದೆ.

ಇನ್ನು ವಿಚಾರಣೆಯಲ್ಲಿ ಆರೋಪಿ ತಪ್ಪು ಒಪ್ಪಿದ್ದು, ವಾಹನಕ್ಕೆ ಡಿಕ್ಕಿ ಹೊಡೆದಿದ್ದು ನಿಜ, ನನ್ನ ಬೈಕ್ ಗೂ ಡ್ಯಾಮೇಜ್ ಆಗಿದೆ. ನಾನು ಯಾವುದೇ ರಾಂಗ್ ರೂಟ್ ನಲ್ಲಿ ಬರಲಿಲ್ಲ, ಜನರು ಥಳಿಸುತ್ತಾರೆಂದು ಭಯದಿಂದ ಓಡಿದೆ. ನಾನು ಬೈಕ್ ಓಡಿಸುವಾಗ ಅವರು ಬಿಡುತ್ತಾರೆ ಅಂದುಕೊಂಡಿದ್ದೆ, ಅವರು ಗಟ್ಟಿಯಾಗಿ ಜೋತು ಹಾಕಿಕೊಂಡಿದ್ದರು. ಅವರು ಬಿಡಲಿಲ್ಲ,ನಾನು ಭಯದಿಂದ ಹಾಗೆ ಮಾಡಿದೆ, ನಾಯಂಡನಹಳ್ಳಿ ನಿವಾಸಕ್ಕೆ ನಾನು ಹೋಗುತ್ತಿದ್ದೆ ಎಂದು ಆರೋಪಿ ಸುಹೇಲ್’ಹೇಳಿದ್ದಾನೆ.

ಅವನ ದುರುಹಂಕಾರಕ್ಕೆ ನಾನು ಅವನ ಹಿಂದೆ ಹೋಗಿದ್ದೆ ಎಂದು ಬೈಕಿನ ಹಿಂದೆ ನೇತುಬಿದ್ದ ಚಾಲಕ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!