ಆತ್ಮಹತ್ಯೆಗೆ ಸ್ವಿಜರ್ಲ್ಯಾಂಡ್‌ಗೆ ಹೊರಟ ಸ್ನೇಹಿತನನ್ನು ಉಳಿಸಿಕೊಳ್ಳಲು ಮಹಿಳೆ ಪಡಿಪಾಟಲು! ಆತನನ್ನು ತಡೆಯುವಂತೆ ಹೈಕೋರ್ಟ್‌ಗೆ ಅರ್ಜಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಆತ ನೊಯ್ಡಾ ಮೂಲದ 48 ವರ್ಷದ ದುರ್ಬಲ ಆರೋಗ್ಯ ಸ್ಥಿತಿ ಹೊಂದಿರುವ ವ್ಯಕ್ತಿ. ಅನಾರೋಗ್ಯಪೀಡಿತ ದೇಹ ಹೊತ್ತು ಬದುಕುವ ಆಸೆಯನ್ನು ಕೈಬಿಟ್ಟಿರುವ ಆತ ಸಂಸ್ಥೆಯೊಂದರ ಸಹಾಯ ಪಡೆದು ಆತ್ಮಹತ್ಯೆ ಅಥವಾ ದಯಾಮರಣಕ್ಕೆ ಒಳಗಾಗಲು ಯುರೋಪ್‌ಗೆ ಪ್ರಯಾಣಿಸಲು ಮುಂದಾಗಿದ್ದಾನೆ. ಆದರೆ ಆತನ ಸಾವನ್ನು ತಡೆಯಲು ಹರಸಾಹಸ ಪಡುತ್ತಿರುವ ಬೆಂಗಳೂರಿನ ಸ್ನೇಹಿತೆಯೊಬ್ಬಳು ಆತನನ್ನು ಆತ್ಮಹತ್ಯೆ ನಿರ್ಧಾರದಿಂದ ಆತನನ್ನು ರಕ್ಷಿಸುವಂತೆ ಕೋರ್ಟ್‌ ಮೊರೆ ಹೋಗಿದ್ದಾರೆ. ಈ ವಿಶಿಷ್ಠ ಪ್ರಕರಣ ಮುಂದಿನ ವಾರ ದೆಹಲಿ ಹೈಕೋರ್ಟ್‌ ಮುಂದೆ ವಿಚಾರಣೆಗೆ ಬರಲಿದೆ.
ವ್ಯಕ್ತಿ 2014 ರಿಂದ ದೀರ್ಘಕಾಲದ ಆಯಾಸ (ಫೇಟಿಂಗ್ ಸಿಂಡ್ರೋಮ್‌)‌ ಖಾಯಿಲೆಯಿಂದ ಬಳಲುತ್ತಿದ್ದಾನೆ. ಇದರಿಂದ ಬೇಸತ್ತಿರುವ ಆತ ವೈದ್ಯರ ಸಹಾಯದ ಆತ್ಮಹತ್ಯೆ ಮಾಡಿಕೊಳ್ಳಲು ಸ್ವಿಟ್ಜರ್ಲೆಂಡ್‌ಗೆ ಪ್ರಯಾಣಿಸಲು ಯೋಜಿಸುತ್ತಿದ್ದಾನೆ ಎಂದು ಹೇಳಲಾಗಿದೆ. ತನ್ನನು ಆತನ ಆಪ್ತ ಸ್ನೇಹಿತೆ ಎಂದು ಹೇಳಿಕೊಂಡಿರುವ ಮಹಿಳೆ, ಆತನ ಪ್ರಯಾಣವನ್ನು ನಿಲ್ಲಿಸುವ ಮನವಿಯನ್ನು ಅನುಮತಿಸದಿದ್ದರೆ ಅವನ ಪೋಷಕರು, ಇತರ ಕುಟುಂಬ ಸದಸ್ಯರು ಮತ್ತು ಸ್ನೇಹಿತರು “ಭರಿಸಲಾಗದ ನಷ್ಟ” ಮತ್ತು “ಕಷ್ಟ” ಅನುಭವಿಸುತ್ತಾರೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಕೊಡಲು ಅರ್ಜಿ ಸಲ್ಲಿಸಿದ್ದಾಳೆ.
ತನ್ನ ಸ್ನೇಹಿತನಿಗೆ ಎಪ್ಪತ್ತರ ಹರೆಯದ ತನ್ನ ಹೆತ್ತವರು ಹಾಗೂ ಒಬ್ಬ ಸಹೋದರಿ ಇದ್ದಾರೆ. ಅವನಿಗೆ ಭಾರತದೊಳಗೆ ಅಥವಾ ವಿದೇಶದಲ್ಲಿ ಉತ್ತಮ ಚಿಕಿತ್ಸೆಗಳನ್ನು ಪಡೆಯಲು ಯಾವುದೇ ಹಣಕಾಸಿನ ಸಮಸ್ಯೆಗಳಿಲ್ಲ. ಆದರೆ ಆತ ದಯಾಮರಣಕ್ಕೆ ಹೋಗಲು ಅಚಲವಾದ ನಿರ್ಧಾರ ಕೈಗೊಂಡುಬಿಟ್ಟಿದ್ದಾನೆ. ಇದು ವಯಸ್ಸಾದ ಪೋಷಕರ ಜೀವನವನ್ನು ಶೋಚನೀಯವಾಗಿಸುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ದಯಾಮರಣಕ್ಕೆ ಕಠಿಣ ನಿರ್ಭಂಧಗಳಿರುವುದರಿಂದ ಆತ ವಿದೇಶದತ್ತ ಮುಖ ಮಾಡಿದ್ದಾನೆ. ಅವನು ಕೆಲ ದಿನಗಗಳ ಹಿಂದೆ 26 ಯುರೋಪಿಯನ್ ದೇಶಗಳಿಗೆ ಅನಿಯಂತ್ರಿತ ಪ್ರಯಾಣವನ್ನು ಅನುಮತಿಸುವ ಷೆಂಗೆನ್ ವೀಸಾವನ್ನು ಪಡೆದಿದ್ದ. ಬೆಲ್ಜಿಯಂನ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಇಲ್ಲಿನ ಅಧಿಕಾರಿಗಳಿಗೆ “ಸುಳ್ಳು ಮಾಹಿತಿ” ನೀಡಿದ್ದ. ವಾಸ್ತವವಾಗಿ ಆತ ದಯಾಮರಣಕ್ಕಾಗಿ ಮೊದಲ ಸುತ್ತಿನ ಮಾನಸಿಕ ಮೌಲ್ಯಮಾಪನಕ್ಕಾಗಿ ಬೆಲ್ಜಿಯಂ ಮೂಲಕ ಜೂನ್‌ನಲ್ಲಿ ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್‌ಗೆ ಪ್ರಯಾಣಿಸಿದರು ಎಂದು ಮಹಿಳೆ ಅರ್ಜಿಯಲ್ಲಿ ಹೇಳಿದ್ದಾಳೆ.
ವಿದೇಶಿಗರಿಗೆ ದಯಾಮರಣ ಕಲ್ಪಿಸುವ ʼಡಿಗ್ನಿಟಾಸ್ʼ ಸಂಸ್ಥೆ ಅವನ ಅರ್ಜಿಯನ್ನು ಸ್ವೀಕರಿಸಿದೆ. ಆತನ ಸಾವಿಗೆ ಮೊದಲ ಮೌಲ್ಯಮಾಪನವನ್ನು ಅನುಮೋದಿಸಲಾಗಿದೆ ಮತ್ತು ಆತ ಆಗಸ್ಟ್ 2022ರ ಅಂತ್ಯದ ವೇಳೆಗೆ ತನ್ನ ಸಾವಿನ ಕುರಿತಾದ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿದ್ದಾನೆʼ. ಅದಕ್ಕಾಗಿಯೇ ನಾವು ಅವರಿಗೆ ಎಮಿಗ್ರೇಷನ್ ಕ್ಲಿಯರೆನ್ಸ್ ನೀಡದಂತೆ ಪ್ರಾರ್ಥಿಸುತ್ತಿದ್ದೇವೆ. ಆತನನ್ನು ಉಳಿಸಿಕೊಳ್ಳಲು ನಮಗೆ ಬೇರೆ ದಾರಿಯಿಲ್ಲʼ ಎಂದು ಮಹಿಳೆ ಮನವಿ ಮಾಡಿದ್ದಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!