ಭಾರತ್‌ ಜೋಡೋ ಯಾತ್ರೆಯಲ್ಲಿ ಚಾಟಿಯಿಂದ ಹೊಡೆದುಕೊಂಡ ರಾಗಾ: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೆಲಂಗಾಣದಲ್ಲಿ ರಾಹುಲ್ ಗಾಂಧಿ ಜೋಡೋ ಯಾತ್ರೆ ಮುಂದುವರೆದಿದೆ. ಈ ಪ್ರವಾಸದಲ್ಲಿ ರಾಹುಲ್ ಗಾಂಧಿ ಅವರು ತೆಲಂಗಾಣ ಸಂಸ್ಕೃತಿ ಸಂಪ್ರದಾಯಗಳಿಗೆ ಗೌರವ ಸೂಚಿಸುತ್ತಾ ಅವುಗಳನ್ನು ಅನುಸರಿಸುತ್ತಿದ್ದಾರೆ. ಮೊನ್ನೆಯಷ್ಟೇ ಮಹೆಬೂಬ್‌ನಗರ ಜಿಲ್ಲೆಯಲ್ಲಿ ನಡೆದ ಪಾದಯಾತ್ರೆಯಲ್ಲಿ ಆದಿವಾಸಿಗಳೊಂದಿಗೆ ರಾಹುಲ್ ಗಾಂಧಿ ಮಾಡಿದ ನೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಚಾಟಿಯಿಂದ ತಮ್ಮನ್ನು ತಾವು ದಂಡಿಸಿಕೊಂಡಿದ್ದಾರೆ.

ಸಂಗಾರೆಡ್ಡಿ ಕ್ಷೇತ್ರದಲ್ಲಿ ಪಾದಯಾತ್ರೆ ಮುಂದುವರಿಸಿರುವ ರಾಹುಲ್ ಗಾಂಧಿ ಅವರಿಗೆ ತೆಲಂಗಾಣ ಸಂಪ್ರದಾಯದ ಅಂಗವಾಗಿರುವ ಪೋತರಾಜುಗಳನ್ನು ಗೌರವಿಸುತ್ತಾ ಚಾಟಿಯಿಂದ ಥಳಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಪೋತರಾಜುಗಳ ಚಾವಟಿ ತೆಗೆದುಕೊಂಡು ಕುಣಿದಾಡುತ್ತಾ ಹೊಡೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ.

ಜೋಡೋ ಯಾತ್ರೆ ಇದೀಗ ಸಂಗಾರೆಡ್ಡಿ ಜಿಲ್ಲೆಯನ್ನು ತಲುಪಿದೆ. ಮೆರವಣಿಗೆಯುದ್ದಕ್ಕೂ ಅಲ್ಲೊಂದು ಇಲ್ಲೊಂದು ಸಭೆಗಳನ್ನು ಆಯೋಜಿಸಿ ಮಾತನಾಡಿದ್ದಾರೆ.  ಮೇಲಾಗಿ ಮಕ್ಕಳೊಂದಿಗೆ ಆಟವಾಡುತ್ತಾ ಸಾಂಪ್ರದಾಯಿಕ ನೃತ್ಯ ಮಾಡುತ್ತಾ ರಾಹುಲ್ ಗಾಂಧಿಯ ಯಾತ್ರೆ ಮುಂದುವರೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!