ದಶಕದಲ್ಲೇ ಭೀಕರ ಪ್ರಾಕೃತಿಕ ವಿರೋಪಕ್ಕೆ ತುತ್ತಾದ ಭಟ್ಕಳ: ಮಳೆಹಾನಿ ವೀಕ್ಷಣೆಗೆ ಇಂದು ಸಿಎಂ ಭೇಟಿ

ಹೊಸದಿಗಂತ ವರದಿ, ಅಂಕೋಲಾ:
ದಶಕದಲ್ಲೇ ಅತಿ ಭೀಕರ ಮಳೆ ಹಾನಿಗೆ ಒಳಗಾಗಿರುವ ಭಟ್ಕಳ ತಾಲೂಕಿಗೆ ಬುಧವಾರ (ಇಂದು) ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಲಿದ್ದಾರೆ.
ಮಂಗಳವಾರ ಅವ್ಯಾಹತ ಮಳೆಗೆ ಈ ತಾಲೂಕು ತುತ್ತಾಗಿತ್ತು. ಮಳೆಯಬ್ಬರದಲ್ಲಿ ಗುಡ್ಡ ಕುಸಿದು ನಾಲ್ವರು ಮಣ್ಣಿನಡಿ ಸಿಲುಕಿ ದಾರುಣ ಸಾವನ್ನಪ್ಪಿದ್ದರು.
ಈ ದುರಂತದ ಹಿನ್ನೆಲೆಯಲ್ಲಿ ಸಿಎಂ ಭೇಟಿ ಮಾಡಲಿದ್ದು ಕಂದಾಯ ಸಚಿವ ಆರ್. ಅಶೋಕ, ಜಿಲ್ಲಾ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ , ಸಚಿವ ಶಿವರಾಮ ಹೆಬ್ಬಾರ್ , ಶಾಸಕರುಗಳು ಜೊತೆ ಇರಲಿದ್ದಾರೆ.
ಸಿಎಂ ಬೊಮ್ಮಾಯಿ ವಿಮಾನದ ಮೂಲಕ ಗೋವಾ ಬಂದು ಅಲ್ಲಿಂದ ರಸ್ತೆ ಮಾರ್ಗವಾಗಿ 4 ಗಂಟೆಗೆ ಭಟ್ಕಳ ತಲುಪಲಿದ್ದಾರೆ. ಹಾನಿಗೊಳಗಾದ ಪ್ರದೇಶ, ಮೃತಪಟ್ಟವರ ಮನೆ ಭೇಟಿ ನಂತರ ಸಂಜೆ 6 ಗಂಟೆಗೆ ಗೋವಾ ಮೂಲಕ ಬೆಂಗಳೂರು ಮರಳಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!