ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಗಸ್ಟ್ 31 ರಂದು ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಬ್ರಿಟನ್‌ನ ರಾಯಲ್ ಮಿಂಟ್ 24 ಕ್ಯಾರೆಟ್ ಚಿನ್ನದಲ್ಲಿ ಗಣೇಶನ ಕೆತ್ತನೆಯಿರುವ ಬಿಸ್ಕಟ್ ಅನ್ನು ಬಿಡುಗಡೆ ಮಾಡಿದೆ. 20 ಗ್ರಾಂ ಶುದ್ಧ ಚಿನ್ನದಿಂದ ತಯಾರಿಸಿದ ಈ ಚಿನ್ನದ ಗಟ್ಟಿಯ ಬೆಲೆ ಬರೋಬ್ಬರಿ 1,06,578 ರೂ.
ರಾಯಲ್ ಮಿಂಟ್ 2021 ರಲ್ಲಿ ದೀಪಾವಳಿಯ ಸಂದರ್ಭದಲ್ಲಿ ಲಕ್ಷ್ಮಿ ದೇವಿಯ ಚಿತ್ರವಿರುವ ಬಿಸ್ಕೆಟ್‌ಗಳನ್ನು ಮುದ್ರಿಸಿತ್ತು. ವೇಲ್ಸ್‌ನ ಕಾರ್ಡಿಫ್‌ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನದ ನಿಲೇಶ್ ಕಬಾರಿಯಾ ಅವರ ಸಹಯೋಗದೊಂದಿಗೆ ಈ ಬಿಸ್ಕತ್ತುಗಳನ್ನು ತಯಾರು ಮಾಡಲಾಗಿದೆ. ಅಗತ್ಯ ಇರುವವರು ಇವುಗಳನ್ನು ರಾಯಲ್ ಮಿಂಟ್ ವೆಬ್‌ಸೈಟ್‌ನಿಂದ (https://www.royalmint.com/) ಖರೀದಿಸಲು ಅವಕಾಶವಿದೆ.