Monday, October 2, 2023

Latest Posts

ಅದಾನಿ ಕುರಿತು ತನಿಖೆ ಇಲ್ಲ, ಉತ್ತರವಿಲ್ಲ: ಪ್ರಧಾನ ಮಂತ್ರಿಗಳೇ ಯಾಕೆ ಇಷ್ಟೊಂದು ಭಯ ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ಮೋದಿ ವಿರುದ್ಧ ಮತ್ತೆ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, ಅದಾನಿ ಗ್ರೂಪ್ನಲ್ಲಿ ಜನರ ನಿವೃತ್ತಿ ನಿಧಿಯ ಹೂಡಿಕೆಯ ಬಗ್ಗೆ ಹಲವಾರು ಆರೋಪಗಳು ಕೇಳಿಬಂದಿದ್ದರೂ, ಏಕೆ ತನಿಖೆ ನಡೆಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಎಲ್ಐಸಿಯ ಬಂಡವಾಳ, ಅದಾನಿಗೆ!. ಎಸ್ಬಿಐ ಬಂಡವಾಳ, ಅದಾನಿಗೆ!. ಇಪಿಎಫ್ಒ ಬಂಡವಾಳವೂ ಅದಾನಿಗೆ! ‘ಮೋದಾನಿ’ ಬಹಿರಂಗಗೊಂಡ ನಂತರವೂ ಸಾರ್ವಜನಿಕರ ನಿವೃತ್ತಿ ಹಣವನ್ನು ಅದಾನಿ ಕಂಪನಿಗಳಲ್ಲಿ ಏಕೆ ಹೂಡಿಕೆ ಮಾಡಲಾಗುತ್ತಿದೆ?’ ಎಂದು ಕೇಳಿದ್ದಾರೆ.

‘ಪ್ರಧಾನ ಮಂತ್ರಿಗಳೇ, ತನಿಖೆ ಇಲ್ಲ, ಉತ್ತರವಿಲ್ಲ! ಯಾಕೆ ಇಷ್ಟೊಂದು ಭಯ’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಅದಾನಿ ವಿಚಾರದಲ್ಲಿ ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!