ಬರೋಬ್ಬರಿ 208 ಕಿ.ಮೀ ವೇಗದ ಚೆಂಡೆಸೆದ ಭುವಿ!.. ಹೌಹಾರಿದ ಫ್ಯಾನ್ಸ್..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಭಾರತ ಹಾಗೂ ಐರ್ಲೆಂಡ್‌ ತಂಡಗಳ ನಡುವೆ ಡಬ್ಲಿನ್‌ ನಲ್ಲಿ ನಡೆದ ಪ್ರಥಮ ಟಿ-20 ಪಂದ್ಯ ಸಾಕಷ್ಟು ರೋಚಕವಾಗಿತ್ತು. ಮಳೆ ಕಾಡಿದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಐರ್ಲೆಂಡ್‌ 12 ಓವರ್‌ ಗಳಲ್ಲಿ 4 ವಿಕೆಟ್‌ ಗಳಿಸಿ ಭಾರತಕ್ಕೆ 109 ರನ್‌ ಗಳ ಟಾರ್ಗೆಟ್‌ ನೀಡಿತ್ತು.
ಐರ್ಲೆಂಡ್‌ ಇನ್ನಿಂಗ್‌ ಆರಂಭವಾಗುತ್ತಲೇ ಪಂದ್ಯದ ನೇರಪ್ರಸಾರ ವೀಕ್ಷಿಸುತ್ತಿದ್ದ ಅಭಿಮಾನಿಗಳು ಒಂದರೆ ಕ್ಷಣ ಹೌಹಾರಿದರು. ಭಾರತದ ಆರಂಭಿಕ ಬೌಲರ್‌ ಭುವನೇಶ್ವರ್‌ ಕುಮಾರ್‌ ಎಸೆದ ಮೊದಲ ಎಸೆತವೇ ಬರೋಬ್ಬರಿ 201 ಕಿಮಿಗಳಾಗಿತ್ತು!. ಅಭಿಮಾನಿಗಳು ಈ ಅಘಾತದಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಭುವಿ ಮತ್ತೊಂದು ಶಾಕ್‌ ನೀಡಿದರು. ಅದೇ ಓವರ್‌ ನಲ್ಲಿ ಭುವಿ ಎಸೆದ ಮತ್ತೊಂದು ಎಸೆತ 208 ಕಿಮೀಗಳಾಗಿದ್ದನ್ನು ಸ್ಪೀಡೋಮೀಟರ್‌ ತೋರಿಸಿತು!. ಸಾಧಾರಣವಾಗಿ 130-140 ಕಿಮಿ ವೇಗದಲ್ಲಿ ಬೌಲಿಂಗ್‌ ಮಾಡುವ ಭುವನೇಶ್ವರ್‌ ಬೆಂಕಿ ವೇಗ ಕಂಡು ಅಭಿಮಾನಿಗಳು ದಂಗಾದರು.

ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಈ ವರೆಗೆ ಅತ್ಯಂತ ವೇಗದ ಎಸೆತ ಎಸೆತ ಎಸೆದ ದಾಖಲೆ ಇರುವುದು ಪಾಕ್‌ ವೇಗಿ ಶೋಯಬ್‌ ಅಖ್ತರ್‌ ಹೆಸರಿನಲ್ಲಿ. 163.3 ಕಿಮೀ ವೇಗದ ಎಸೆತ ಎಸೆದಿರುವ ಅಖ್ತರ್‌ ದಾಖಲೆ ಸಮೀಪಕ್ಕೆ ಬರಲು ಉಳಿದ ಬೌಲರ್‌ ಗಳಿಗೆ ಸಾಧ್ಯವಾಗಿಲ್ಲ. ಅಂತಹದ್ದರಲ್ಲಿ ಭುವಿ 200 ಕಿಮೀ ಗಿಂತಲೂ ಹೆಚ್ಚಿನ ವೇಗದಲ್ಲಿ ಬೌಲ್‌ ಮಾಡಿರುವುದಾಗಿ ಟಿವಿ ಪರದೆಯ ಮೇಲೆ ಕಾಣಿಸುತ್ತಿದ್ದುದು ಅಭಿಮಾನಿಗಳನ್ನು ಅಚ್ಚರಿಗೀಡು ಮಾಡಿತ್ತು. ಸ್ಪಲ್ಪ ಹೊತ್ತಿನಲ್ಲೇ ಈ ಕುತೂಹಲಕ್ಕೆ ತೆರೆ ಬಿತ್ತು. ಸ್ಪೀಡೋಮೀಟರ್‌ ನಲ್ಲಿನ ತಾಂತ್ರಿಕ ದೋಷದಿಂದ ಈ ಎಡವಟ್ಟು ನಡೆದಿದ್ದು ತಿಳಿದುಬಂದಿದೆ. ಈ ವೇಗವನ್ನು ಪರಿಗಣಿಸದಂತೆ ಸೂಚಿಸಲಾಗಿದೆ.     ಚೆಂಡಿನ ನಿಜವಾದ ವೇಗವು ಖಚಿತವಾಗದಿದ್ದರೂ, ಭುವಿ ಮೊದಲ ಓವರ್‌ ನಲ್ಲಿ ಉತ್ತಮವಾಗಿ ಬೌಲ್‌ ಮಾಡಿದರು, ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಪ್ರಮುಖ ವಿಕೆಟ್‌ ಕಬಳಿಸಿದರು. 109 ರನ್‌ ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 9.2 ಓವರ್‌ ಗಳಲ್ಲಿ ಈ ಮೊತ್ತವನ್ನು ಚೇಸ್‌ ಮಾಡಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!