ಹೊಸದಿಗಂತ ವರದಿ ಸೋಮವಾರಪೇಟೆ:
ವೀರಭದ್ರೇಶ್ವರ ವರ್ಧಂತಿ ಮಹೋತ್ಸವದ ಅಂಗವಾಗಿ ಗೌಡಳ್ಳಿ ಹಾಗೂ ಕೋಟೆಯೂರು ವೀರಭದ್ರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು.
ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ನೇತೃತ್ವದಲ್ಲಿ ತಾಲೂಕಿನ ವಿವಿಧ ವೀರಭದ್ರ ದೇವಾಲಯ ಸಮಿತಿ ಸಹಯೋಗದೊಂದಿಗೆ ವರ್ಧಂತಿ ಮಹೋತ್ಸವದ ಅಂಗವಾಗಿ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕಲ್ಲು ಮಠದ ಮಹಾಂತ ಸ್ವಾಮೀಜಿ ಸಾನಿಧ್ಯದಲ್ಲಿ ದೇವರಿಗೆ ಅಭಿಷೇಕ, ಅಷ್ಟೋತ್ತರ ಹಾಗೂ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರವೇರಿತು.
ಐದನೇ ವರ್ಷದ ವೀರಭದ್ರೇಶ್ವರ ವರ್ಧಂತಿ ನೆನಪಿಗಾಗಿ ದೇವಾಲಯದ ಆವರಣದಲ್ಲಿ ಬಿಲ್ವಪತ್ರೆ ಹಾಗೂ ರುದ್ರಾಕ್ಷಿ ಗಿಡ ನೆಡಲಾಯಿತು.
ಈ ಸಂದರ್ಭ ಸಂಘಟನಾ ವೇದಿಕೆಯ ರಾಷ್ಟ್ರೀಯ ಕಾರ್ಯದರ್ಶಿ ಎಸ್.ಮಹೇಶ್, ತಾಲೂಕು ಅಧ್ಯಕ್ಷ ಜಯರಾಜ್, ಹೋಬಳಿ ಅಧ್ಯಕ್ಷ ಪ್ರಸನ್ನ ,ಗೌಡಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಜ್ಜಳ್ಳಿ ನವೀನ್, ದೇವಾಲಯ ಸಮಿತಿ ಅಧ್ಯಕ್ಷ ದಿನೇಶ್, ಗೌಡಳ್ಳಿ ದೇವಾಲಯ ಸಮಿತಿ ಅಧ್ಯಕ್ಷ ರಾಜಪ್ಪ, ಪ್ರಮುಖರಾದ ದಿಲೀಪ್, ಸುನಿಲ್, ಲೋಹಿತ್, ದಿನೇಶ್ ಮುಂತಾದವರು ಹಾಜರಿದ್ದರು.