Sunday, June 26, 2022

Latest Posts

ಬೀದರ್: ಅಕ್ರಮವಾಗಿ ಸಾಗಿಸುತ್ತಿದ್ದ 262 ಕೆ.ಜಿ ಗಾಂಜಾ ವಶಕ್ಕೆ

ಹೊಸದಿಗಂತ ವರದಿ, ಬೀದರ್‌
ಬೀದರ್ ತಾಲ್ಲೂಕಿನ ಬಗದಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮೀನಕೇರಾ ಕ್ರಾಸ್ ಬಳಿ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳನ್ನು ಅಡ್ಡಗಟ್ಟಿರುವ ಪೊಲೀಸರು ಬರೋಬ್ಬರಿ 262 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಅಂದಾಜು 26.20 ಲಕ್ಷ ಮೌಲ್ಯದ ಗಾಂಜಾ, ಟಾಟಾ ಗೂಡ್ಸ್ ವಾಹನ, ಮೊಬೈಲ್, ರೂ. 500 ನಗದು ವಶಕ್ಕೆ ಪಡೆದು ಆರೋಪಿಗಳಾದ ರುಸ್ತುಮ್ ಅಲಿಯಾಸ್ ಖಾಲೀದ್ ಮುಜಫರ್ ಖಾನ್ ಮು. ಶಾಮರಾಜಪುರ, ಭಾಲ್ಕಿ ತಾಲ್ಲೂಕಿನ ಮಾವಿನಹಳ್ಳಿಯ ಮೋಹನ್ ಕಾಶಿನಾಥ ಮೇತ್ರೆ ಎಂಬುವವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಡಿವೈಎಸ್ಪಿ ಕೆ.ಎಮ್ ಸತೀಶ ಅವರ ಮಾರ್ಗದರ್ಶನದಲ್ಲಿ ಬೀದರ ಗ್ರಾಮೀಣ ಸಿಪಿಐ ಶ್ರೀಕಾಂತ್ ಅಲ್ಲಾಪುರ ಬಗದಲ್ ಠಾಣೆ ಪಿಎಸ್ಐ ಸಂಗೀತಾ, ಎಎಸ್ ಐ ಅಶೋಕ ಕೋಟೆ, ವಿಲಾಸ್, ಸಿಬ್ಬಂದಿಯಾದ ರವಿಕಾಂತ, ಸುನೀಲ ಧಿಮಾಕೆ, ಸುನೀಲ ರಾಜ್, ಅಶೋಕ ಕೋಟೆ, ಶಿವಕುಮಾರ್, ಮಕ್ಸೂದ್, ಶರಣಯ್ಯ ಸ್ವಾಮಿ ಪ್ರಶಾಂತ, ವಾಹನ ಚಾಲಕ ಸಂಜುಕುಮಾರ್ ಪಾಲ್ಗೊಂಡಿದ್ದರು. ಕಾರ್ಯಾಚರಣೆ ನಡೆಸಿ ಗಾಂಜಾ ವಶಪಡಿಸಿಕೊಂಡಿರುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ ಬಾಬು ಶ್ಲಾಘಿಸಿದ್ದಾರೆ.
ಈ ಕುರಿತು ಬಗದಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss