ಮೂರು ಸಿಂಹಗಳೊಂದಿಗೆ ಮೊಸಳೆ ಹೋರಾಟ: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭೂಮಿ ಮೇಲೆ ವಾಸಿಸುವ ಪ್ರಾಣಿಗಳು ನೀರಿನಲ್ಲಿ ಹೋರಾಟ ಮಾಡಲಾರವು. ಅದೇ ರೀತಿ ನೀರಿನಲ್ಲಿರುವ ಪ್ರಾಣಿಗಳು ಭೂಮಿ ಮೇಲೆ ತಮ್ಮ ಪ್ರಾಬಲ್ಯವನ್ನು ಕಳೆದುಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ದಡಕ್ಕೆ ಬಂದ ಮೊಸಳೆಯೊಂದು ಮೂರು ಸಿಂಹಗಳೊಂದಿಗೆ ಹೋರಾಡಲು ಸತತ ಪ್ರಯತ್ನ ಮಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ನೀರಿನಿಂದ ದಡಕ್ಕೆ ಬಂದ ಮೊಸಳೆಯ ಮೇಲೆ ಮೂರು ಸಿಂಹಗಳು ದಾಳಿ ಮಾಡಿದೆ. ಮೊಸಳೆ ಸಿಂಹಗಳ ಮೇಲೆ ತಿರುಗಿ ಬಿದ್ದು ತನ್ನನ್ನು ತಾನು ರಕ್ಷಿಸಿಕೊಂಡಿದೆ. ಲಯನ್ಸ್ ಡೈಲಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೊನೆ ಉಸಿರುವವರೆಗೂ ಹೋರಾಡುವುದನ್ನು ನಿಲ್ಲಿಸಬಾರದು ಎಂದು ವಿಡಿಯೋ ನೋಡಿದ ನೆಟ್ಟಿಗರು ಮೊಸಳೆ ದಂಗೆಯ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!