Sunday, June 4, 2023

Latest Posts

ಅಯೋಧ್ಯೆ ರಾಮಮಂದಿರಕ್ಕೆ ಕರ್ನಾಟಕದ ಜನರನ್ನು ಆಹ್ವಾನಿಸಿದ ಯೋಗಿ

ಹೊಸದಿಗಂತ ವರದಿ ಮಂಡ್ಯ:

ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರವು 2024ರ ಜನವರಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಯೋಧ್ಯೆಯಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಜಾಗ ಕೇಳಿದ್ದರು. ನಾವು ಕರ್ನಾಟಕ ಭವನ ನಿರ್ಮಾಣಕ್ಕೆ ಜಾಗ ಕೊಟ್ಟಿದ್ದೇವೆ. ಎಲ್ಲರೂ ಬಂದು ರಾಮ ಮಂದಿರ ವೀಕ್ಷಣೆ ಮಾಡಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕರೆ ನೀಡಿದರು.

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಅಯೋಧ್ಯೆ ರಾಮಮಂದಿರಕ್ಕೆ ಕರ್ನಾಟಕದ ಜನ ಬರಬೇಕೆಂದು ಆಹ್ವಾನಿಸಿದರು.

ಯುಪಿ ಹಾಗೂ ಕರ್ನಾಟಕ್ಕೆ ಅವಿನಾಭಾವ ಸಂಬಂಧ :

ಈ ವೇಳೆ ಉತ್ತರ ಪ್ರದೇಶ ಮತ್ತು ಕರ್ನಾಟಕಕ್ಕೂ ಅವಿನಾಭಾವ ಸಂಬಂಧ ಇದೆ. ತ್ರೇತಾಯುಗದಲ್ಲಿ ಶ್ರೀರಾಮ ವನವಾಸಕ್ಕೆ ಬಂದಾಗ ಹನುಮಂತ ಕರ್ನಾಟಕದಲ್ಲೇ ಸಿಕ್ಕಿದ್ದು. ಈ ಹಿನ್ನೆಲೆಯಲ್ಲಿ ಭಕ್ತ ಮತ್ತು ಸ್ವಾಮಿಯ ಸಂಬಂಧದ ರೀತಿಯಲ್ಲಿದೆ ಎಂದು ಹೇಳಿದರು.

ಆದಿಚುಂಚನಗಿರಿ ಮಠಕ್ಕೆ ನಂಟು :

ಆದಿಚುನಗಿರಿ ಮಠದ ಭೈರವೇಶ್ವರನಿಗೂ ಉತ್ತರ ಪ್ರದೇಶದ ಗೋರಖ್‌ಪುರಕ್ಕೂ ಸಂಬಂಧ ಇದೆ.
ಎರಡೂ ಮಠಗಳು ನಾಥ ಪರಂಪರೆಯ ಮಠಗಳಾಗಿವೆ. ಹಾಗಾಗಿ ಮಂಡ್ಯಕ್ಕೂ ನಮಗೂ ನಂಟಿದೆ ಎಂದು ನಂಟು ಬೆಸೆಯುವ ಮಾತುಗಳನ್ನಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!