RECIPE| ಪದೇ ಪದೇ ತನ್ನಬೇಕೆನಿಸುವ ಟೇಸ್ಟಿ..ಟೇಸ್ಟಿ…ಮಶ್ರೂಮ್‌ ಫ್ರೈ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಸಾಮಾಗ್ರಿಗಳು :

ಅಣಬೆ
ಈರುಳ್ಳಿ – 3
ಹಸಿಮೆಣಸಿನಕಾಯಿ – 4
ಶುಂಠಿ ಪೇಸ್ಟ್ – 1 ಚಮಚ
ಕೊತ್ತಂಬರಿ ಪುಡಿ – ಅರ್ಧ ಚಮಚ
ಜೀರಿಗೆ ಪುಡಿ – ಅರ್ಧ ಚಮಚ
ಮೆಣಸಿನಪುಡಿ – 1 ಚಮಚ
ಉಪ್ಪು – ರುಚಿಗೆ
ಅರಿಶಿನ – ಚಿಟಿಕೆ
ಎಣ್ಣೆ – ಸಾಕಷ್ಟು
ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ: 

ಅಣಬೆಗಳನ್ನು ಕೆಸರು ಇಲ್ಲದೆ ನೀರಿನಿಂದ ಸ್ವಚ್ಛವಾಗಿ ತೊಳೆಯಿರಿ. ಸ್ವಚ್ಛಗೊಳಿಸಿದ ಅಣಬೆಗಳನ್ನು ನಿಮಗೆ ಇಷ್ಟವಾದಂತೆ ಕತ್ತರಿಸಿ, ಅವುಗಳನ್ನು ಒಂದು ಪಾತ್ರೆಯಲ್ಲಿ ಮಶ್ರೂಮ್ ಮುಳುಗುವವರೆಗೆ ನೀರನ್ನು ಸುರಿದು ಒಲೆಯ ಮೇಲೆ ಇರಿಸಿ. ಇದಕ್ಕೆ ಒಂದು ಚಿಟಿಕೆ ಅರಿಶಿನ ಮತ್ತು ಸ್ವಲ್ಪ ಉಪ್ಪು ಸೇರಿಸಿ ಎರಡು ಉಕ್ಕು ಬರುವವರೆಗೆ ಬೇಯಿಸಿ. ನಂತರ ನೀರಿನಿಂದ ಅಣಬೆಗಳನ್ನು ಪ್ರತ್ಯೇಕಿಸಿ. ಈಗ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ.

ಸ್ಟವ್ ಆನ್ ಮಾಡಿ ಬಾಣಲೆ ಇಟ್ಟು ಬೇಕಾದಷ್ಟು ಎಣ್ಣೆ ಹಾಕಿ ಬೇಯಲು ಬಿಡಿ. ಎಣ್ಣೆ ಬಿಸಿಯಾದ ನಂತರ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಹುರಿಯಿರಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ. ಐದು ನಿಮಿಷಗಳ ನಂತರ ಬೇಯಿಸಿದ ಅಣಬೆಗಳನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದಕ್ಕೆ ಬೇಕಾದಷ್ಟು ಉಪ್ಪು, ಖಾರದಪುಡಿ, ಧನಿಯಾ ಪುಡಿ ಮತ್ತು ಜೀರಿಗೆ ಪುಡಿ ಹಾಕಿ ಮಿಕ್ಸ್ ಮಾಡುತ್ತಿರಿ. ಇಲ್ಲದಿದ್ದರೆ ತಳ ಹಿಡಿಯಬಹುದು.

ಈ ಎಲ್ಲಾ ಮಸಾಲ ಅಣಬೆಗೆ ಹಿಡಿದ ನಂದತರ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮತ್ತು ಸ್ಟವ್ ಆಫ್ ಮಾಡಿ. ಅಷ್ಟೇ…. ಟೇಸ್ಟಿ ಮಶ್ರೂಮ್ ಫ್ರೈ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!