May 20, 2026
Wednesday, May 20, 2026
spot_img

ಸಣ್ಣ ವಿಚಾರಕ್ಕೆ ದೊಡ್ಡ ಜಗಳ: ಹಲ್ಲೆ ಮಾಡಿದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಮಾವ, ಭಾವ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಣ್ಣ ವಿಚಾರ ದೊಡ್ಡ ಗಲಾಟೆಗೆ ತಿರುಗಿ ದೊಣ್ಣೆ, ಬೇಸ್‌ಬಾಲ್ ಬ್ಯಾಟ್‌ನಿಂದ ಹಲ್ಲೆ ನಡೆಸಿದ ಘಟನೆ ಬೈಕುಲ್ಲಾ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ರಸ್ತೆ ಗುಂಡಿಯಲ್ಲಿ ಕಾರು ಹೋಗುವಾಗ ಗುಡಿಯ ನೀರು ಮೈಮೇಲೆ ಬಿದ್ದ ಕಾರಣಕ್ಕೆ ಕುಟುಂಬದ ಮೂವರ ಮೇಲೆ ದಾಳಿಯ ಆರೋಪದಡಿ, ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರ ಮಾವ ಮತ್ತು ಭಾವ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಶನಿವಾರ ನಡೆದ ಈ ಘಟನೆಯಲ್ಲಿ, ಯೂಸುಫ್ ಖಾನ್ ಎಂಬ ವ್ಯಕ್ತಿ ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ, ಗುಂಡಿಯ ನೀರು ಪಕ್ಕದಲ್ಲಿದ್ದ ಯೂಸುಫ್ ಪಠಾಣ್ ಅವರ ಸಂಬಂಧಿ ಶೋಯಬ್ ಖಾನ್ ಮೇಲೆ ಬಿದ್ದಿದೆ. ಈ ಘಟನೆ ಮಾತಿನ ಚಕಮಕಿಗೆ ಕಾರಣವಾಗಿ, ಬಳಿಕ ದೈಹಿಕ ಹಲ್ಲೆಗೆ ತಿರುಗಿದೆ ಎಂದು ತಿಳಿದುಬಂದಿದೆ.

ಸಂತ್ರಸ್ತನ ಹೇಳಿಕೆಯ ಪ್ರಕಾರ, ಕ್ಷಮೆ ಕೇಳಲು ಕಾರು ನಿಲ್ಲಿಸಿದ್ದರೂ ಪರಿಸ್ಥಿತಿ ವಿಕೋಪಕ್ಕೆ ತಲುಪಿದೆ. ಶೋಯಬ್ ಖಾನ್ ಕಾರಿನ ಗಾಜು ಒಡೆದು, ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:

ಈ ಘಟನೆ ಬಳಿಕ ದೂರು ನೀಡಲು ತೆರಳುತ್ತಿದ್ದ ವೇಳೆ, ಯೂಸುಫ್ ಪಠಾಣ್ ಅವರ ಮಾವ ಖಾಲಿದ್ ಖಾನ್ ಅಲಿಯಾಸ್ ಮಕಾಲಿಕ್ ಮತ್ತೆ ದಾರಿ ಮಧ್ಯೆ ತಡೆದು, ಇನ್ನಷ್ಟು ಜನರೊಂದಿಗೆ ಸೇರಿ ದೊಣ್ಣೆ ಮತ್ತು ಬೇಸ್‌ಬಾಲ್ ಬ್ಯಾಟ್ ಬಳಸಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಈ ದಾಳಿಯಲ್ಲಿ ಯೂಸುಫ್ ಖಾನ್ ಸಹೋದರನ ಕೈ ಮೂಳೆ ಮುರಿದಿದ್ದು, ಇನ್ನೊಬ್ಬ ಸಂಬಂಧಿಗೆ ಗಂಭೀರ ಗಾಯಗಳಾಗಿವೆ. ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಆರೋಪಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !