BIG NEWS | ರಿಷಿ ಸುನಕ್ ಗೆ ಹಿನ್ನೆಡೆ: ಬ್ರಿಟನ್ ನೂತನ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬ್ರಿಟನ್ ನೂತನ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆಯಾಗಿದ್ದಾರೆ.
ಬೊರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೇರಲು ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್ ಹಾಗೂ ಲಿಜ್ ಟ್ರಸ್ ನಡುವೆ ತೀವ್ರ ಸ್ಪರ್ಧೆ ಎರ್ಪಟ್ಟಿತ್ತು.

ಅಂತಿಮವಾಗಿ ಲಿಜ್ ಟ್ರಸ್ ಅತೀ ಹೆಚ್ಚಿನ ಮತಗಳ ಮೂಲಕ ಕನ್ಸರ್ವೇಟೀವ್ ಪಾಕ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದೀಗ ಲಿಜ್ ಟ್ರಸ್ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಮತದಾನ ಪ್ರಕ್ರಿಯೆ ನಡೆದಿತ್ತು. ಇದರಲ್ಲಿ ಲಿಜ್ ಟ್ರಸ್ 82 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರೆ, ರಿಷಿ ಸುನಕ್ 62 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಲಿಜ್ ಟ್ರಸ್ ಬ್ರಿಟನ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಬ್ರಿಟನ್ ಪ್ರಧಾನಿ ಯಾರಾಗಬೇಕು ಅನ್ನೋ ಚುನಾವಣೆಯಲ್ಲಿ ಶೇಕಡಾ 82.7 ರಷ್ಟು ಮತದಾನವಾಗಿದೆ. ಇದರಲ್ಲಿ 655 ಮತಗಳು ತಿರಸ್ಕೃತಗೊಂಡಿದೆ. ರಿಷಿ ಸುನಕ 60,399 ಮತಗಳನ್ನು ಪಡೆದರೆ, ಲಿಜ್ ಟ್ರಸ್ 81,326 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಲಿಜ್ ಟ್ರಸ್ ಕನ್ಸರ್ವೇಟೀವ್ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸರಿಸುಮಾರು 20 ಸಾವಿರ ಮತಗಳ ಅಂತರದಿಂದ ರಿಷಿ ಸುನಕ್ ಹಿಂದಿಕ್ಕಿ ಲಿಜ್ ಟ್ರಸ್ ಕನ್ಸರ್ವೇಟೀವ್ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!