Thursday, September 29, 2022

Latest Posts

ಪಾಲಿಟ್ರೌಮಾದಿಂದ ಸೈರಸ್ ಮಿಸ್ತ್ರಿ ಸಾವು: ಪೋಸ್ಟ್ ಮಾರ್ಟಮ್ ರಿಪೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸೈರಸ್ ಮಿಸ್ತ್ರಿ ಸಾವಿನ ಕುರಿತು ಮರಣೋತ್ತರ ಪರೀಕ್ಷೆಯಲ್ಲಿ ಮಾಹಿತಿ ಸಿಕ್ಕಿದೆ. ಅಪಘಾತದಿಂದ ದೇಹದೊಳಗೆ ಉಂಟಾದ ಗಂಭೀರ ಆಂತರಿಕ ಗಾಯದಿಂದ ಸೈರಸ್ ಮಿಸ್ತ್ರಿ ಮೃತಪಟ್ಟಿದ್ದಾರೆ ಪರೀಕ್ಷೆಯಲ್ಲಿ ತಿಳಿದು ಬಂದಿದೆ.

ವೈದ್ಯಕೀಯ ಭಾಷೆಯಲ್ಲಿ ಇದನ್ನು ಪಾಲಿಟ್ರೌಮಾ ಎನ್ನುತ್ತಾರೆ. ಇದರಿಂದ ಮಿಸ್ತ್ರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ಸೈರಸ್ ಮತ್ತು ಜಹಾಂಗೀರ್ ಇವರ ಮರಣೋತ್ತರ ಪರೀಕ್ಷೆಯು ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ನಡೆಯಿತು. ಪರೀಕ್ಷಾ ವರದಿಯು ಇದೀಗ ಲಭ್ಯವಾಗಿದೆ.

ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಭಾನುವಾರ ಮಧ್ಯಾಹ್ನ ನಡೆದ ಅಪಘಾತದಲ್ಲಿ ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದರು.

54 ವರ್ಷದ ಮಿಸ್ತ್ರಿ ಅವರ ಮರ್ಸಿಡಿಸ್ ಜಿಎಲ್‌ಸಿ 220 ಕಾರು ಮಹಾರಾಷ್ಟ್ರದ ಪಾಲ್ಘರ್ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತವಾಗಿತ್ತು. ಮಿಸ್ತ್ರಿ ಮತ್ತು ಅವರ ಸ್ನೇಹಿತ ಜಹಾಂಗೀರ್ ಪಾಂಡೋಲೆ (49) ಸಾವನ್ನಪ್ಪಿದ್ದು, ಕಾರು ಚಲಾಯಿಸುತ್ತಿದ್ದ ವೈದ್ಯೆ ಅನಹಿತಾ ಪಾಂಡೋಲೆ ಮತ್ತು ಆಕೆಯ ಪತಿ ಡೇರಿಯಸ್ ಪಾಂಡೋಲೆ ಗಾಯಗೊಂಡಿದ್ದಾರೆ.

ಈ ಕುರಿತು ಮಾತನಾಡಿದ ವೈದ್ಯ ಡಾ. ಶುಭಂ ಸಿಂಗ್, ಆರಂಭದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಬೇಕಿತ್ತು. ಆದರೆ ತಜ್ಞ ವೈದ್ಯರ ಅಭಿಪ್ರಾಯ ಪಡೆಯುವ ಸಲುವಾಗಿ ಜೆಜೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿಗಳು ನಮಗೆ ಫೋನ್ ಮಾಡಿದ್ದರು. ಹೀಗಾಗಿ ಮರಣೋತ್ತರ ಪರೀಕ್ಷೆಯನ್ನು ಜೆಜೆ ಆಸ್ಪತ್ರೆಯಲ್ಲಿ ನಡೆಸಲಾಯಿತು ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!