Sunday, November 27, 2022

Latest Posts

BIG NEWS | ಚಂದನವನದ ಹಿರಿಯ ನಟ ಲೋಹಿತಾಶ್ವ ವಿಧಿವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಂದನವನದ ಹಿರಿಯ ನಟ ಲೋಹಿತಾಶ್ವ ವಿಧಿವಶರಾಗಿದ್ದಾರೆ. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾಗಿದ್ದ ನಟ ಲೋಹಿತಾಶ್ವ ಅವರನ್ನು ಸಾಗರ್ ಅಪಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಮಧ್ಯಾಹ್ನ 2:45 ಕ್ಕೆ ಅವರು ವಿಧಿ ವಶರಾಗಿದ್ದಾರೆ.

ತಮ್ಮ ಕಂಚಿನ ಕಂಠ, ಪ್ರಬುದ್ಧ ನಟನೆಯ ಮೂಲಕ ಕನ್ನಡ ಸಿನಿಪ್ರಿಯರ ನೆನಪಲ್ಲಿ ಅಚ್ಚಳಯದೇ ಉಳಿದಿರುವ ನಟ ಲೋಹಿತಾಶ್ವ. ತುಮಕೂರಿನ ತೊಂಡಗೆರೆಯಲ್ಲಿ 1939 ರಲ್ಲಿ ಜನಿಸಿದ ಇವರು ವೃತ್ತಿಯಿಂದ ಇಂಗ್ಲಿಷ್ ಪ್ರಾಧ್ಯಾಪಕರು.ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿರುವ ಇವರು ಕೆಲವು ಕಿರುತೆರೆ ಧಾರಾವಾಹಿಗಳಲ್ಲಿ , ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಇಂಗ್ಲೀಷ್ ಸಾಹಿತ್ಯದಲ್ಲಿ ಮೈಸೂರು ಯುನಿವರ್ಸಿಟಿಯಿಂದ ಪಿ.ಹೆಚ್.ಡಿ ಪಡೆದಿರುವ ಇವರು ಕೆಲವು ನಾಟಕಗಳು, ಕವನ ಸಂಕಲನ, ಕಥಾ ಸಂಕಲನ ಬರೆದಿದ್ದಾರೆ.ಇವರ ಮಗ ಶರತ್ ಲೋಹಿತಾಶ್ವ ಕೂಡ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!