ಮೆಡಿಕಲ್ ಶಿಕ್ಷಣ ಲಾಭಗಳಿಸುವ ವ್ಯವಹಾರವಲ್ಲ, ಶುಲ್ಕ ಕೈಗೆಟುಕುವಂತಿರಬೇಕು: ಸುಪ್ರೀಂ ಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶಿಕ್ಷಣ ಎಂದರೆ ಅದು ಲಾಭಗಳಿಸುವ ವ್ಯವಹಾರವಲ್ಲ. ಬೋಧನಾ ಶುಲ್ಕ ಯಾವಾಗಲೂವಿದ್ಯಾರ್ಥಿಗಳ ಕೈಗೆಟುಕುವ ದರದಲ್ಲಿ ಇರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಮೂಲಕ ಆಂಧ್ರಪ್ರದೇಶ ಹೈಕೋರ್ಟ್‌ನ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ.

2017 ರಲ್ಲಿ ಅನುದಾನ ರಹಿತ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ (MBBS) ಕೋರ್ಸ್‌ನ ವಾರ್ಷಿಕ ಬೋಧನಾ ಶುಲ್ಕವನ್ನು 24 ಲಕ್ಷ ರೂ.ಗಳಿಗೆ ಏರಿಕೆ ಮಾಡಿದ ಆಂಧ್ರ ಸರ್ಕಾರದ ಆದೇಶವನ್ನು ರದ್ದು ಮಾಡಿದೆ.

ಜೊತೆಗೆ 2011ರಲ್ಲಿ ನಿಗದಿಪಡಿಸಿದ್ದ ಶುಲ್ಕಕ್ಕಿಂತ ಏಳು ಪಟ್ಟು ಹೆಚ್ಚಿರುವ ವಾರ್ಷಿಕ ಶುಲ್ಕವನ್ನು 24 ಲಕ್ಷ ರೂ.ಗಳಿಗೆ ಹೆಚ್ಚಿಸಿರುವ 2017ರ ರಾಜ್ಯ ಸರ್ಕಾರದ ನಿರ್ಧಾರ ಸರಿಯಲ್ಲ ಎಂದು ನ್ಯಾಯಮೂರ್ತಿಗಳಾದ ಎಂ.ಆರ್. ಷಾ ಹಾಗೂ ಎಂ.ಎಂ.ರುದ್ರೇಶ್ ಅವರಿದ್ದ ದ್ವಿಸದಸ್ಯ ಪೀಠ ಹೇಳಿದೆ.

ಶಿಕ್ಷಣವು ಲಾಭ ಗಳಿಸುವ ವ್ಯವಹಾರವಲ್ಲ. ಹಾಗಾಗಿ ಬೋಧನಾ ಶುಲ್ಕ ಯಾವಾಗಲೂ ಕೈಗೆಟುಕುವಂತಿರಬೇಕು ಎಂದು ಹೇಳಿದ ಕೋರ್ಟ್ ಸರ್ಕಾರಕ್ಕೆ ಚಾಟಿ ಬೀಸಿದೆ.

ರಾಜ್ಯ ಸರ್ಕಾರ ಹಾಗೂ ಮೇಲ್ಮನವಿದಾರರಾಗಿರುವ ವೈದ್ಯಕೀಯ ಕಾಲೇಜು, ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ (NALSA) ಹಾಗೂ ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಮತ್ತು ಸಮನ್ವಯ ಯೋಜನಾ ಸಮಿತಿ (MCPC)ಗೆ ತಲಾ 2.5 ಲಕ್ಷ ದಂಡ ಪಾವತಿಸುವಂತೆ ಸೂಚಿಸಿದೆ. ಜೊತೆಗೆ 2017ರ ಸೆಪ್ಟಂಬರ್‌ನಲ್ಲಿ ಹೊರಡಿಸಲಾದ ಸರ್ಕಾರಿ ಆದೇಶ (GO) ಅಡಿಯಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚುವರಿಯಾಗಿ ವಸೂಲಿ ಮಾಡಿದ ಶುಲ್ಕವನ್ನು ಮರುಪಾವತಿಸಬೇಕೆಂದು ಕೋರ್ಟ್ ಸೂಚಿಸಿದೆ.

ಇನ್ನು ಮುಂದೆ ಬೋಧನಾ ಶುಲ್ಕ ನಿರ್ಧರಿಸುವಾಗ ವೃತ್ತಿಪರ ಸಂಸ್ಥೆಯ ಸ್ಥಳ, ವೃತ್ತಿಪರ ಕೋರ್ಸ್ನ ಸ್ವರೂಪ, ಲಭ್ಯವಿರುವ ಮೂಲಸೌಕರ್ಯಗಳ ವೆಚ್ಚ, ಆಡಳಿತ ಮತ್ತು ನಿರ್ವಹಣೆಗೆ ಖರ್ಚು, ಸಂಸ್ಥೆಯ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಹೆಚ್ಚುವರಿ ಅಗತ್ಯವಿದೆಯೇ? ಮೀಸಲು ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ಮನ್ನಾ ಮಾಡುವ ವಿಧಾನ ಅಳವಡಿಸಿಕೊಂಡಿದೆಯೇ? ಈ ಎಲ್ಲಾ ಅಂಶಗಳನ್ನು ಪ್ರವೇಶ ಮತ್ತು ಶುಲ್ಕ ನಿಯಂತ್ರಣ ಸಮಿತಿ (AFRC) ಪರಿಗಣಿಸಿ ಶುಲ್ಕವನ್ನು ನಿರ್ಧರಿಸಬೇಕು ಎಂದು ಪೀಠ ನಿರ್ದೇಶನ ನೀಡಿದೆ.

ಆಂಧ್ರ ಪ್ರದೇಶ ಸರ್ಕಾರವು ಸೆಪ್ಟೆಂಬರ್ 6, 2017 ರಂದು ತನ್ನ ಸರ್ಕಾರಿ ಆದೇಶದ ಮೂಲಕ MBBS ವಿದ್ಯಾರ್ಥಿಗಳು ಪಾವತಿಸಬೇಕಾದ ಬೋಧನಾ ಶುಲ್ಕವನ್ನು ಹೆಚ್ಚಿಸಿದೆ. 2017-2020 ರ ಬ್ಲಾಕ್ ವರ್ಷಗಳ ಬೋಧನಾ ಶುಲ್ಕವನ್ನು ಹೆಚ್ಚಿಸುವ ಸೆಪ್ಟೆಂಬರ್ 6, 2017 ರ ಸರ್ಕಾರಿ ಆದೇಶವನ್ನು ತಳ್ಳುವ ಮತ್ತು ರದ್ದುಗೊಳಿಸುವಲ್ಲಿ ಆಂಧ್ರ ಹೈಕೋರ್ಟ್ ಯಾವುದೇ ತಪ್ಪು ಮಾಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದೇವೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!