BIG NEWS | ಪಾಕ್ ವಿರುದ್ದದ ಹೈವೋಲ್ಟೇಜ್ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

  1. ಏಷ್ಯಾ ಕಪ್​ 2022ರ ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಪಾಕ್ ವಿರುದ್ಧ ರೋಚಕ ೫ ವಿಕೆಟ್ ಗಳ ಗೆಲುವು ಸಾಧಿಸಿದೆ.
    ಪಾಕ್ ನೀಡಿದ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ  ವಿಕೆಟ್ ನಷ್ಟಕ್ಕೆ ಗೆಲುವು ಸಾಧಿಸಿತು.
    ಬ್ಯಾಟಿಂಗ್ ಇಳಿದ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್​ ಮೊದಲ ವಿಕೆಟ್​ ಆಗುವ ಮೂಲಕ ಆರಂಭಿಕ ಆಘಾತ ಎದುರಿಸಿತು.
    ಬಳಿಕ ಕ್ರಿಸ್​ ಆಗಮಿಸಿದ ವಿರಾಟ್​ ಕೊಹ್ಲಿ ಸಮಾಧಾನದಿಂದ ಬ್ಯಾಟಿಂಗ್ ನಡೆಸಿ 34 ಎಸೆತದಲ್ಲಿ 3 ಬೌಂಡರಿ ಮತ್ತು 1 ಸಿಕ್ಸ್ ನೆರವಿನಿಂದ 35 ರನ್ ಗಳಸಿ ಮೊಹಮ್ಮದ್ ನವಾಜ್ ಅವರಿಗೆ ವಿಕೆಟ್​ ಒಪ್ಪಿಸಿದರು. ಇತ್ತ ನಾಯಕ ರೋಹಿತ್ ಶರ್ಮಾ 18 ಬೌಲ್​ ನಲ್ಲಿ ಕೇವಲ 12 ರನ್ ಗಳಿಸಿ ಮೊಹಮ್ಮದ್ ನವಾಜ್ ಅವರಿಗೆ ಔಟ್​ ಆದರು.
    ಬಳಿಕ ಬಂದ ರವೀಂದ್ರ ಜಡೇಜಾ, ಸೂರ್ಯಕುಮಾರ್ ಯಾದವ್ ಜೊತೆಯಾಡಿ ತಂಡದ ಮೊತ್ತವನ್ನು ಗೆಲ್ಲುವಿನತ್ತ ಸಾಗಿಸಿದರು. ಇದರ ನಡುವೆ ಯಾದವ್ ವಿಕೆಟ್ ಒಪ್ಪಿಸಿದರು. ಮತ್ತೆ ಬಂದ ಪಾಂಡ್ಯ ಉತ್ತಮ ಬ್ಯಾಟಿಂಗ್ ನಡೆಸಿ ತಂಡವನ್ನು ಗೆಲುವಿನ‌ ದಡ ತಲುಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!