ಭಾರತದ ಬಿಗು ಬೌಲಿಂಗ್ ಗೆ ಪಾಕ್ ತತ್ತರ: ರೋಹಿತ್ ಪಡೆ ಗೆಲುವಿಗೆ 148 ರನ್ ಟಾರ್ಗೆಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಏಷ್ಯಾಕಪ್ ನ ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್ ಸೋತ ಪಾಕ್ 20 ಓವರ್ ನಲ್ಲಿ ತನ್ನ ಎಲ್ಲ ವಿಕೆಟ್ ಕಳೆದುಗೊಂಡು 147 ರನ್ ಗಳಿಸಿದ್ದು, ಈ ಮೂಲಕ ರೋಹಿತ್ ಪಡೆಗೆ ಗೆಲುವಿಗೆ ರನ್ ಟಾರ್ಗೆಟ್ ನೀಡಿದೆ.
ಭುವನೇಶ್ವರ್ ಕುಮಾರ್, ಪಾಂಡ್ಯ ಮಾರಕ ಬೌಲಿಂಗ್ ಗೆ ಪಾಕ್ ಆಟಗಾರರರು ರನ್ ಗಳಿಸುವಲ್ಲಿ ಎಡವಿದರು.
ಮೊದಲು ಬ್ಯಾಟಿಂಗ್​ ಆರಂಭಿಸಿರುವ ಪಾಕ್​ ತಂಡಕ್ಕೆ ಆರಂಭಿಕ ಆಘಾತ ಉಂಟಾಗಿದೆ. ಪಾಕ್​ ನಾಯಕ ಬಾಬರ್ ಅಜಂ ವಿಕೆಟ್​ ಬೇಗನೆ ಪತನಗೊಂಡಿತ್ತು.
ಒನ್​ ಡೌನ್​ ಆಟಗಾರನಾಗಿ ಕಣಕ್ಕಿಳಿದಿದ್ದ ಫಖರ್ ಜಮಾನ್ ​10 ರನ್​ ಗಳಿಸಿ ಪೆವಿಲಿಯನ್​ ಸೇರಿದರು.
ಇತ್ತ ಪಾಕ್ ರನ್ ಗತಿಯನ್ನು ರಿಜ್ವಾನ್ ಏರಿಸುತ್ತಾ ಹೋಗಿದ್ದು, ಉತ್ತಮ ಬ್ಯಾಟಿಂಗ್ ನಡೆಸಿದರು. ಇವರಿಗೆ ಸಾಥ್ ನೀಡಿದ ಇಫ್ತಿಕರ್ ಅಹ್ಮದ್ 28 ಗಳಿಸಿ ಔಟಾದರು. ಇದರ ಬೆನ್ನೆಲ್ಲೆ ಕುಶ್ ದಿಲ್ ಶಾ ಕೂಡ ಪೆವಿಲಿಯನ್ ನತ್ತ ಮುಖಮಾಡಿದರು.
ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದ ರಿಜ್ವಾನ್ ಪಾಂಡ್ಯ ಬೌಲಿಂಗ್ ಗೆ ದೊಡ್ಡ ಹೊಡೆತಕ್ಕೆ ಪಯತ್ನ ಪಟ್ಟು 43 ಗಳಿಸಿ ಔಟಾದರು. ಇದಾದ ಬಳಿಕ ಬಂದ ಆಟಗಾರರು ಹೆಚ್ಚು ಹೊತ್ತು ಕ್ರಿಸ್ ನಲ್ಲಿ ನಿಲುವಲ್ಲಿ ವಿಫಲರಾದರು. ಅಂತಿಮವಾಗಿ ಪಾಕ್ 147 ರನ್ ಗೆ ತನ್ನ ಎಲ್ಲ ವಿಕೆಟ್ ಕಳೆದುಕೊಂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!