ಬ್ರಿಟೀಷರೊಂದಿಗೆ ಹಲವಾರು ಹೋರಾಟಗಳಲ್ಲಿ ಭಾಗಿಯಾಗಿ ಗಲ್ಲಿಗೇರಿದ್ದರು ತಾಜಿ ಡೆಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ( ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ವಿಶೇಷ)
ತಾಜಿ ಡೆಲೆ ಇಪ್ಪತ್ತನೇ ಶತಮಾನದ ಆರಂಭದಲ್ಲಿ ಅರುಣಾಚಲ ಪ್ರದೇಶದ ಎಲೋಪ್ ಪ್ರದೇಶದ ಪ್ರಸಿದ್ದ ಸ್ವಾತಂತ್ರ್ಯ ಹೋರಾಟಗಾರರರಾಗಿದ್ದರು. ಅವರು ಗೆರಿಲ್ಲಾ ಯುದ್ಧತಂತ್ರದ ವಿವರಗಳನ್ನು ಚೆನ್ನಾಗಿ ತಿಳಿದಿದ್ದರು.
ಬ್ರಿಟೀಷರೊಂದಿಗಿನ ತಾಜಿ ಡೆಲೆ ಅವರ ಸ್ವಾತಂತ್ರ್ಯ ಹೋರಾಟವು ಮಿಶ್ಮಿ ಹಿಲ್ಸ್‌ನ ಆಕ್ರಮಣಕ್ಕೆ ಪ್ರತಿರೋಧ ತೋರುವಲ್ಲಿನಿಂದ ಪ್ರಾರಂಭವಾಯಿತು. ಮತ್ತೋರ್ವ ಹೋರಾಟಗಾರ ಪೊಂಗೆ ಡೆಲೆ ಅವರೊಂದಿಗೆ ಸೇರಿ ಬ್ರಿಟೀಷರಿಗೆ ಸೇರಿದ್ದ ಸಾದಿಯಾ ಪ್ರದೇಶದಲ್ಲಿ ಹಲವಾರು ದಾಳಿಗಳನ್ನು ನಡೆಸಿದರು. ತಾಜಿ ಡೆಲೆ ಅವರು ಡಿಕ್ರಾಂಗ್ ನ ಬ್ರಿಟೀಷ್ ಬ್ಲಾಕ್ ಹೌಸ್ ಮೇಲೆ ದಾಳಿ ಮಾಡಿದ ಸೇನಾಪಡೆಯ ಪ್ರಮುಖ ಸದಸ್ಯರಾಗಿದ್ದರು. ಯುದ್ಧಭೂಮಿಯಲ್ಲಿ ಅವರ ಸಾಹಸಗಳನ್ನು ಕಣಿವೆಯ ಜನರು ಇಂದಿಗೂ ಉತ್ಸಾಹಭರಿತ ರೀತಿಯಲ್ಲಿ ವಿವರಿಸುತ್ತಾರೆ.
1914 ರ ಎರಡನೇ ಬೆಬೆಜಿಯಾ ಮಿಶ್ಮಿ ದಂಡಯಾತ್ರೆಯಲ್ಲಿ ಅವರು ಬ್ರಿಟಿಷ್ ಸೈನ್ಯದ ವಿರುದ್ಧ ತಮ್ಮ ಬುಡಕಟ್ಟಿನ ಜನರನ್ನು ಮುನ್ನಡೆಸಿದರು. ದುರಾದೃಷವಶಾತ್ ಅವರು ಸಾದಿಯಾದಲ್ಲಿ ಸೆರೆಸಿಕ್ಕರು. 29 ಜನವರಿ 1918 ರಂದು ತೇಜ್‌ಪುರ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!