BIG NEWS | ರಷ್ಯಾ-ಉಕ್ರೇನ್‌ ಮಾತುಕತೆ ಯಶಸ್ಸು: ಕೈವ್- ಚೆರ್ನಿಹಿವ್‌ನಲ್ಲಿ ಮಿಲಿಟರಿ ಚಟುವಟಿಕೆ ಕಡಿಮೆ ಮಾಡಲು ನಿರ್ಧಾರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ-ಉಕ್ರೇನ್‌ 4ನೇ ಸುತ್ತಿನ ಮಾತುಕತೆ ಇಸ್ತಾಂಬುಲ್‌ನಲ್ಲಿ ನಡೆದಿದ್ದು, ಕೊಂಚ ಯಶಸ್ವಿಯಾದ ಲಕ್ಷಣಗಳು ಕಾಣುತ್ತಿದೆ.
ಉಕ್ರೇನ್ ರಾಜಧಾನಿ ಕೈವ್ ಮತ್ತು ಉತ್ತರದ ನಗರವಾದ ಚೆರ್ನಿಹಿವ್‌ನಲ್ಲಿ ಮಿಲಿಟರಿ ಚಟುವಟಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲು ರಷ್ಯಾ ನಿರ್ಧರಿಸಿದೆ . ಈ ಮೂಲಕ ಯುದ್ಧ ಆರಂಭವಾದ ಬಳಿಕ ಮೊದಲ ರಿಯಾಯಿತಿಯಾಗಿದೆ.
ನಂಬಿಕೆಯನ್ನುಪರಸ್ಪರ ಹೆಚ್ಚಿಸಲು ಮತ್ತು ಹೆಚ್ಚಿನ ಮಾತುಕತೆಗಳಿಗೆ ಪರಿಸ್ಥಿತಿಯನ್ನು ಸೃಷ್ಟಿಸಲು ಜೊತೆಗೆ ಒಪ್ಪಂದಕ್ಕೆ ಸಹಿ ಮಾಡುವ ಅಂತಿಮ ಗುರಿಯನ್ನು ಸಾಧಿಸಲು, ಕೈವ್ ಮತ್ತು ಚೆರ್ನಿಹಿವ್ ದಿಕ್ಕುಗಳಲ್ಲಿ ಮಿಲಿಟರಿ ಚಟುವಟಿಕೆಯನ್ನು ಆಮೂಲಾಗ್ರವಾಗಿ, ದೊಡ್ಡ ಅಂತರದಿಂದ ಕಡಿಮೆ ಮಾಡಲು ನಿರ್ಧರಿಸಲಾಯಿತು ಎಂದು ರಷ್ಯಾದ ಉಪ ರಕ್ಷಣಾ ಸಚಿವ ಅಲೆಕ್ಸಾಂಡರ್ ಫೋಮಿನ್ ಹೇಳಿದ್ದಾರೆ.
ಮಾತುಕತೆಯಲ್ಲಿ ಅರ್ಥಪೂರ್ಣ ಚರ್ಚೆ ನಡೆದಿದೆ . ಉಕ್ರೇನ್ ಮುಂದಿಟ್ಟ ಪ್ರಸ್ತಾಪಗಳನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮುಂದೆ ಇಡಲಾಗುವುದು ಎಂದು ಮುಖ್ಯ ಸಂಧಾನಕಾರ ವ್ಲಾಡಿಮಿರ್ ಮೆಡಿನ್ಸ್ಕಿ ಹೇಳಿದ್ದಾರೆ.
ಮಿಲಿಟರಿಯ ಉಕ್ರೇನಿಯನ್ ಜನರಲ್ ಸ್ಟಾಫ್ ಈ ಹಿಂದೆ ಕೈವ್ ಮತ್ತು ಚೆರ್ನಿಹಿವ್ ಸುತ್ತಲೂ ಹಿಂಪಡೆಯುವಿಕೆಯನ್ನು ಗಮನಿಸಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!