July 9, 2026
Thursday, July 9, 2026
spot_img

ಗುರ್ಮೀತ್ ರಾಮ್ ರಹೀಮ್‌ಗೆ ಮತ್ತೆ ಬಿಗ್ ರಿಲೀಫ್: 16ನೇ ಬಾರಿಗೆ ಸಿಕ್ಕಿತು 30 ದಿನಗಳ ಪೆರೋಲ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೊಲೆ, ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜೈಲುಪಾಲಾಗಿರುವ ಹರಿಯಾಣದ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ್​ ರಹೀಮ್​ ಸಿಂಗ್‌ಗೆ ಮತ್ತೆ 30 ದಿನಗಳ ಪೆರೋಲ್ ನೀಡಲಾಗಿದೆ.

ಡೇರಾ ಪ್ರಧಾನ ಕಚೇರಿಯಲ್ಲಿ ವಾಸ್ತವ್ಯ

2017ರಲ್ಲಿ ಜೈಲು ಸೇರಿದ ಬಳಿಕ ರಾಮ್ ರಹೀಮ್‌ಗೆ 6ನೇ ಬಾರಿಗೆ ಪೆರೋಲ್ ಮಂಜೂರಾಗಿದ್ದು, 30 ದಿನಗಳ ಅವಧಿಗೆ ನೀಡಲಾಗಿದೆ. ಈ ಸಮಯದಲ್ಲಿ ಸಿರ್ಸಾದಲ್ಲಿರುವ ಡೇರಾ ಸಚ್ಚಾ ಸೌದಾ ಮುಖ್ಯ ಕಚೇರಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಇದಕ್ಕೂ ಮುನ್ನ 2026ರ ಜನವರಿ ತಿಂಗಳಿನಲ್ಲೂ 15 ಬಾರಿಗೆ ಪೆರೋಲ್ ಮಂಜೂರು ಮಾಡಲಾಗಿತ್ತು.

20 ವರ್ಷಗಳ ಜೈಲು ಶಿಕ್ಷೆ

2017ರಲ್ಲಿ ತನ್ನ ಇಬ್ಬರು ಮಹಿಳಾ ಅನುಯಾಯಿಗಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. 2019ರಲ್ಲಿ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಕೊಲೆ ಪ್ರಕರಣದಲ್ಲೂ ರಾಮ್ ರಹೀಮ್ ಸೇರಿದಂತೆ ಇತರ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

https://hosadigantha.com/category/national/#google_vignette

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !