July 1, 2026
Wednesday, July 1, 2026
spot_img

ಮೊಹಮ್ಮದ್ ಶಮಿಗೆ ಬಿಗ್ ರಿಲೀಫ್: ಪತ್ನಿ ಮಾಡಿದ ಆರೋಪದಿಂದ ಮುಕ್ತನಾದ ಟೀಮ್ ಇಂಡಿಯಾ ವೇಗಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಟೀಮ್ ಇಂಡಿಯಾ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಹೆಂಡತಿ ಹಸಿನ್ ಜಹಾನ್ ಮಾಡಿದ ಆರೋಪದಿಂದ ಮುಕ್ತನಾಗಿದ್ದಾರೆ.

ಚೆಕ್ ಬೌನ್ಸ್ ಪ್ರಕರಣ

2018 ರ ಚೆಕ್ ಬೌನ್ಸ್ ಪ್ರಕರಣ ಸಂಬಂಧ ಶಮಿ ವಿರುದ್ಧ ಹಸಿನ್ ಜಹಾನ್ ಮಾಡಿದ ಆರೋಪಗಳಿಂದ ಅಲಿಪೋರ್ ಕೋರ್ಟ್ ಖುಲಾಸೆಗೊಳಿಸಿದೆ.

ಶಮಿಗೆ ಸಿಕ್ಕಿತು ಬಿಗ್ ರಿಲೀಫ್

ಶಮಿ ವಿರುದ್ಧ ಹಸಿನ್ 1 ಲಕ್ಷ ರೂ. ಚೆಕ್ ಬೌನ್ಸ್ ಪ್ರಕರಣವನ್ನು ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ ಅಲಿಪೋರ್ ನ್ಯಾಯಾಲಯವು ಪ್ರಕರಣದಲ್ಲಿನ ಎಲ್ಲಾ ಆರೋಪಗಳಿಂದ ಶಮಿಯನ್ನು ಖುಲಾಸೆಗೊಳಿಸಿತು.

ನಂಬಿಕೆಗೆ ಸಿಕ್ಕ ಜಯ

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದೇ ತಪ್ಪು ಮಾಡಿಲ್ಲದ ಕಾರಣ ತೀರ್ಪು ತಮ್ಮ ಪರವಾಗಿ ಬರಲಿದೆ ಎಂಬ ನಂಬಿಕೆ ಇತ್ತು. ಇದೀಗ ಎಲ್ಲವೂ ಇತ್ಯರ್ಥವಾಗಿದೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ನಲ್ಲಿದೆ ಮತ್ತೊಂದು ಕೇಸ್

ಇತ್ತ ಮೊಹಮ್ಮದ್ ಶಮಿ ಮತ್ತು ಅವರ ಮಾಜಿ ಪತ್ನಿ ಹಸಿನ್ ಜಹಾನ್ ನಡುವಿನ ಜೀವನಾಂಶ ವಿವಾದ ಇನ್ನೂ ಸುಪ್ರೀಂ ಕೋರ್ಟ್‌ ನಲ್ಲಿ ನಡೆಯುತ್ತಿದೆ.

ಕಳೆದ ವರ್ಷ ಜುಲೈನಲ್ಲಿ ಕೋಲ್ಕತ್ತಾ ಹೈಕೋರ್ಟ್‌ ಶಮಿಗೆ ಪತ್ನಿ ಮತ್ತು ಮಗಳಿಗೆ ತಿಂಗಳಿಗೆ 4 ಲಕ್ಷ ರೂ. ಜೀವನಾಂಶ ನೀಡಬೇಕೆಂದು ಆದೇಶ ಹೊರಡಿಸಿದ್ದರು. ಈ ಸಂಬಂಧ ಹಸಿನ್ ಜಹಾನ್ ಈ ಮೊತ್ತವನ್ನು 10 ಲಕ್ಷ ರೂ.ಗಳಿಗೆ ಹೆಚ್ಚಿಸಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಸದ್ಯ ಕೋಲ್ಕತ್ತಾ ಹೈಕೋರ್ಟ್ ಆದೇಶದ ಪ್ರಕಾರ, ಶಮಿ ತನ್ನ ಮಗಳಿಗೆ ತಿಂಗಳಿಗೆ 2.5 ಲಕ್ಷ ಮತ್ತು ಜಹಾನ್‌ಗೆ 1.5 ಲಕ್ಷ ರೂ.ಗಳನ್ನು ಜೀವನಾಂಶವಾಗಿ ನೀಡುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !