ಹುಬ್ಬೇರಿಸುವಂತಿದೆ ವಿಜಯ್‌ ‘ವಾರಿಸು’ ಚಿತ್ರದ ನಾನ್ ಥಿಯೇಟ್ರಿಕಲ್ ರೈಟ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಮಿಳಿನ ಸ್ಟಾರ್ ಹೀರೋ, ದಳಪತಿ ವಿಜಯ್ ಅವರ ‘ವಾರಿಸು’ ಗಾಗಿ ಪ್ರೇಕ್ಷಕರು ಮತ್ತು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಸಿನಿಮಾವನ್ನು ಟಾಲಿವುಡ್ ನಿರ್ದೇಶಕ ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡುತ್ತಿರುವುದರಿಂದ ತೆಲುಗುನವರಿಗೂ ಕೂಡ ಈ ಸಿನಿಮಾದ ಬಗ್ಗೆ ಒಳ್ಳೆಯ ನಿರೀಕ್ಷೆ ಹುಟ್ಟು ಹಾಕಿದೆ. ಈಗಾಗಲೇ ಶರವೇಗದಲ್ಲಿ ಚಿತ್ರೀಕರಣ ನಡೆಸುತ್ತಿರುವ ಈ ಸಿನಿಮಾ ಶೀಘ್ರದಲ್ಲೇ ಶೂಟಿಂಗ್ ಮುಗಿಸಲಿದೆ.

ಈ ಚಿತ್ರದ ನಾನ್ ಥಿಯೇಟ್ರಿಕಲ್ ರೈಟ್ಸ್ ಭಾರೀ ದರಕ್ಕೆ ಅಂದರೆ, ಒಟ್ಟು ರೂ.120 ಕೋಟಿಗೆ ಮಾರಾಟವಾಗಿದೆಯಂತೆ. ಪ್ರೈಮ್ ವಿಡಿಯೋ ಚಿತ್ರದ ಡಿಜಿಟಲ್ ಹಕ್ಕುಗಳನ್ನು ರೂ.60 ಕೋಟಿಗೆ ಭರ್ಜರಿಯಾಗಿ ಖರೀದಿಸಿದರೆ, ಸನ್ ನೆಟ್‌ವರ್ಕ್ ರೂ.50 ಕೋಟಿಗೆ ಸ್ಯಾಟಲೈಟ್ ಹಕ್ಕುಗಳನ್ನು ಪಡೆದುಕೊಂಡಿದೆ. ಇನ್ನು ಈ ಚಿತ್ರದ ಆಡಿಯೋ ರೈಟ್ಸ್ ರೂಪದಲ್ಲಿ ಇನ್ನೂ ರು.10 ಕೋಟಿ ಗಳಿಕೆಯಾಗಿದೆಯಂತೆ.

ನಾನ್ ಥಿಯೇಟ್ರಿಕಲ್ ರೈಟ್ಸ್ ಈ ಮಟ್ಟದಲ್ಲಿ ಬಿಸಿನೆಸ್ ಮಾಡುತ್ತಿದೆ ಎಂದರೆ ಈ ಸಿನಿಮಾ ಎಂತಹ ಕ್ರೇಜ್ ಹೊಂದಿದೆ ಎಂಬುದು ಅರ್ಥವಾಗುತ್ತದೆ. ಈ ಚಿತ್ರವನ್ನು ತೆಲುಗಿನಲ್ಲಿ ‘ವಾರಸುಡು’ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗುತ್ತಿದೆ. ಈ ಸಿನಿಮಾದಲ್ಲಿ ಬ್ಯೂಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದು, ತಮನ್ ಸಂಗೀತ ನೀಡುತ್ತಿದ್ದಾರೆ. ಸಂಕ್ರಾಂತಿಯ ಉಡುಗೊರೆಯಾಗಿ ಈ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!