ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಕಿರುತೆರೆಯಲ್ಲಿ ಮನೆ ಮಾತಾದ ನಟಿ ರಚಿತಾ ಮಹಾಲಕ್ಷ್ಮಿಬಳಿಕ ತಮಿಳಿನಲ್ಲಿ ನಟಿಸಲು ಆರಂಭಿಸಿ ಬಿಗ್ ಬಾಸ್ಗೆ ಕಾಲಿತ್ತಿದ್ದರು.
ಇದೀಗ ಇದ್ರ ಬೆನ್ನಲ್ಲೇ ವೈಯಕ್ತಿಕ ವಿಚಾರವಾಗಿಯೂ ನಟಿ ಸುದ್ದಿಯಾಗ್ತಿದ್ದಾರೆ. ಪತಿ ದಿನೇಶ್ ಗೋಪಾಲಸ್ವಾಮಿ ಡಿವೋರ್ಸ್ ಕೊಡಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದೆ.
ತಮಿಳಿನ ಜನಪ್ರಿಯ ಧಾರಾವಾಹಿಯಾದ `ಪಿರಿವೊಮ್ ಸಂದಿಪ್ಪೊಮ್’ನಲ್ಲಿ ರಚಿತಾ- ದಿನೇಶ್ ಜೋಡಿಯಾಗಿ ನಟಿಸಿದ್ದರು. ಈ ವೇಳೆ ಇಬ್ಬರಿಗೂ ಪ್ರೀತಿಯಾಗಿ ಗುರುಹಿರಿಯರ ಒಪ್ಪಿಗೆಯ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಇದೀಗ ರಚಿತಾ ಕಮಲ್ ಹಾಸನ್ ನಿರೂಪಣೆಯ ಬಿಗ್ ಬಾಸ್ನಲ್ಲಿ 60 ದಿನಗಳನ್ನ ಪೂರೈಸಿದ್ದಾರೆ. ಇನ್ನೂ 40 ದಿನಗಳ ಆಟ ಬಾಕಿಯಿದೆ. ಈ ಬೆನ್ನಲ್ಲೇ ಡಿವೋರ್ಸ್ ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ.
ಆದ್ರೆ ಈ ಡಿವೋರ್ಸ್ ಸುದ್ದಿ ನಿಜಾನಾ? ಎಂಬುದಕ್ಕೆ ಬಿಗ್ ಬಾಸ್ ಶೋ ಬಳಿಕ ರಚಿತಾ ಅವರಿಂದಲೇ ಉತ್ತರ ಸಿಗಲಿದೆ.