ಚಾತ್ ಹಬ್ಬಕ್ಕೆ ಗೇಟ್ ಪಾಸ್ ಕೊಟ್ಟ ಬಿಹಾರ ಸರಕಾರ: ಸಿಎಂ ನಿತೀಶ್ ವಿರುದ್ಧ ಬಿಜೆಪಿ ಕೆಂಡಾಮಂಡಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಹಾರ ಸರಕಾರ ಚಾತ್ ಹಬ್ಬ ಸೇರಿದಂತೆ ಕೆಲ ಹಿಂದುಗಳ ಹಬ್ಬಗಳಿಗೆ ನೀಡಲಾಗಿದ್ದ ರಜೆಯನ್ನು ಕಡಿತಗೊಳಿಸಿದೆ.ಇದೀಗ ಬಿಜೆಪಿಯನ್ನು ಕೆರಳಿಸಿದೆ.

ಸರ್ಕಾರ ಹಿಂದು ವಿರೋಧಿ ನೀತಿ ತಾಳುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಇಷ್ಟೇ ಅಲ್ಲ ಈ ನಿರ್ಧಾರದಿಂದ ತಕ್ಷಣವೇ ಹಿಂದೆ ಸರಿಯಬೇಕು ಎಂದು ಎಚ್ಚರಿಸಿದೆ.

ಸರ್ಕಾರಿ ಶಾಲೆಗಳಿಗೆ ನೀಡಿರುವ ಕೆಲ ಹಿಂದು ಹಬ್ಬಗಳ ರಜೆ ಕಡಿತಗೊಳಿಸಲಾಗಿದೆ. ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ತೀವ್ರ ಜಟಾಪಟಿಗೆ ಕಾರಣವಾಗಿದೆ.

ಬಿಹಾರದಲ್ಲಿ ಚಾತ್ ಹಬ್ಬ ಪ್ರತಿ ಮನೆಯಲ್ಲಿ ಆಚರಿಸುತ್ತಾರೆ. ಕುಟುಂಬಸ್ಥರು, ಮಕ್ಕಳು ಜೊತೆ ಸಂತೋಷದಿಂದ ಈ ಹಬ್ಬ ಆಚರಿಸಲಾಗುತ್ತದೆ. ಆದರೆ ಚಾತ್ ಹಬ್ಬದ ರಜೆ ಕಡಿತ ಮಾಡಲಾಗಿದೆ. ಇದೀಗ ಮಕ್ಕಳು ಚಾತ್ ಹಬ್ಬದ ದಿನ ಶಾಲಾ ತರಗತಿ ನಡೆಯುವಂತೆ ಮಾಡಲಾಗಿದೆ. ಇದರಿಂದ ಮಕ್ಕಳು ಚಾತ್ ಹಬ್ಬದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಈ ಮೂಲಕ ಮುಂದಿನ ಪೀಳಿಗೆಗೆ ಹಿಂದೂ ಹಬ್ಬಗಳು, ಸಂಸ್ಕೃತಿಗಳ ಜ್ಞಾನ ಇಲ್ಲದಂತೆ ಮಾಡಲಾಗುತ್ತಿದೆ. ಮೇಲ್ನೋಟಕ್ಕೆ ಕೇವಲ ರಜೆ ಕಡಿತವಾಗಿದ್ದರೂ, ಒಂದು ಸಂಸ್ಕೃತಿಯನ್ನು, ಪರಂಪರೆಯನ್ನು ನಾಶ ಮಾಡುವ ಅತೀ ದೊಡ್ಡ ಹುನ್ನಾರ ಇದರ ಹಿಂದಿದೆ ಎಂದು ಬಿಹಾರ ಬಿಜೆಪಿ ನಾಯಕ, ರಾಜ್ಯ ಸಭಾ ಸಂಸದ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.

ಇದುವರೆಗೆ ಬಿಹಾರದಲ್ಲಿ ಹಿಂದು ಹಬ್ಬಗಳಿಗೆ ಸೆಪ್ಟೆಂಬರ್‌ನಿಂದ ಡಿಸೆಂಬರ್ ತಿಂಗಳ ವರೆಗೆ 23 ರಜೆ ನೀಡಲಾಗಿತ್ತು. ಇದೀಗ ರಜಾ ದಿನಗಳ ಸಂಖ್ಯೆಯನ್ನು 11ಕ್ಕೆ ಇಳಿಸಲಾಗಿದೆ. ದೀಪಾವಳಿ ರಜೆಯನ್ನು ಒಂದು ದಿನಕ್ಕೆ ಇಳಿಸಲಾಗಿದೆ. ಸರ್ಕಾರ ಈ ನಿರ್ಧಾರದಿಂದ ತಕ್ಷಣ ಹಿಂದೆ ಸರಿಯಬೇಕು. ಈ ಹಿಂದೆ ಇರುವ ರಜಾ ನಿಮಯವನ್ನೇ ಪಾಲಿಸಬೇಕು ಎಂದು ಬಿಜೆಪಿ ಎಚ್ಚರಿಕೆ ನೀಡಿದೆ. ನಿತೀಶ್ ಕುಮಾರ್ ಸರ್ಕಾರ ಹಿಂದೂ ವಿರೋಧಿ ನೀತಿ ತಳೆದರೆ ಉಗ್ರ ಪ್ರತಿಭಟನೆ ಎಚ್ಚರಿಕೆಯನ್ನು ಬಿಜೆಪಿ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!