ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಹಕ್ಕಿ ಜ್ವರದ ಆತಂಕ ಎಲ್ಲೆಡೆ ಮನೆ ಮಾಡಿದೆ. ಜನ ಚಿಕನ್ ತಿನ್ನೋಕೆ ಯೋಚನೆ ಮಾಡುವಂತಾಗಿದೆ. ಚಿಕನ್ ತಿನ್ನಲು ಹೆದರುತ್ತಿರುವ ಜನ ಮಟನ್ ಹಾಗೂ ಫಿಶ್ ಮೊರೆ ಹೋಗುತ್ತಿದ್ದಾರೆ.
ಇದನ್ನೇ ಬಂಡವಾಳವಾಗಿ ಇಟ್ಟುಕೊಂಡಿರುವ ಮಟನ್ ಉದ್ಯಮ ಪ್ರತಿ ಕೆಜಿಗೆ 50 ರೂಪಾಯಿ ಹೆಚ್ಚಳ ಮಾಡಿದೆ. ಇನ್ನು ಬೇರೆ ಕಡೆಗಳಿಂದ ತರಿಸಿಕೊಳ್ಳುವ ಚಿಕನ್ ಬೆಲೆ ಕೂಡ ಪ್ರತಿ ಕೆಜಿಗೆ 20 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಚಿಕ್ಕಬಳ್ಳಾಪುರದಲ್ಲಿ 5ನೇ ದಿನವೂ ಸಹ ವರದಹಳ್ಳಿ ಗ್ರಾಮದಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಕೋಳಿಗಳ ಹತ್ಯೆ ಮಾಡಿದಂತೆ ಡಿಸ್ ಇನ್‌ಫೆಕ್ಷನ್ ದ್ರಾವಣ ಸಿಂಪಡಿಸಿ ವೈರಸ್ ನಿಯಂತ್ರಣಕ್ಕೆ ಇನ್ನಿಲ್ಲದ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ.
ನಿರಂತರವಾಗಿ ಮೂರು ತಿಂಗಳ ಕಾಲ ಗ್ರಾಮದಲ್ಲಿ ನಿಗಾ ಇಡಲಾಗುತ್ತಿದೆ. ಮೂರು ತಿಂಗಳು ಕೋಳಿಮುಕ್ತ ಗ್ರಾಮವಾಗಿ ವರದಹಳ್ಳಿ ಇರಬೇಕಿದೆ. ಯಾವುದೇ ಹೊಸ ಕೋಳಿ ಸಾಕಾಣಿಕೆಗೆ ಅವಕಾಶವೇ ಇಲ್ಲ. ಸದ್ಯ 1 ಕಿಮೀ ವ್ಯಾಪ್ತಿಯಲ್ಲಿ ಕಂಟೋನ್ಮೆಂಟ್ ಝೋನ್ ಇದ್ದು. ಮುಂದಿನ ದಿನಗಳಲ್ಲಿ 10 ಕಿಮೀ ವ್ಯಾಪ್ತಿಯಲ್ಲಿ ಮಾದರಿಗಳನ್ನ ಪ್ರಯೋಗಲಾಯಕ್ಕೆ ಕಳುಹಿಸಿ ವೈರಸ್ ನಿರ್ಮೂಲನೆಗೆ ಮತ್ತಷ್ಟು ಕ್ರಮ ಕೈಗೊಳ್ಳಲಾಗುವುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.