ನೀವು ಬೆಳಗ್ಗೆ ಎದ್ದಾಗ ಯಾವ ರೀತಿಯಲ್ಲಿ ನಿಮ್ಮ ದಿನ ಪ್ರಾರಂಭಿಸುತ್ತೀರಿ ಎನ್ನುವುದರ ಮೇಲೆ ನಿಮ್ಮ ಇಡೀ ದಿನ ನಿರ್ಧಾರವಾಗಿರುತ್ತದೆ. ಅದ್ಕಕೆ ಬೆಳಗ್ಗೆ ಎದ್ದ ಕೂಡಲೇ ಈ 5 ಕೆಲಸಗಳನ್ನ ಮಾಡಲು ಮರೆಯಬೇಡಿ.
ಯೋಚನೆ ಮಾಡಬೇಡಿ, ಯೋಜನೆ ಮಾಡಿ
ಇವತ್ತು ನೀವು ಯಾವೆಲ್ಲ ಕೆಲಸ ಮಾಡಬೇಕು ಎಂದು ಹಿಂದಿನ ರಾತ್ರಿಯೇ ಪಟ್ಟಿ ಮಾಡಿ ಇಡಬೇಕು. ಇದರಿಂದ ಬೆಳಗ್ಗೆ ಎದ್ದಾಗಲೇ ನಿಮಗೆ ಏನೆಲ್ಲಾ ಮಾಡಬೇಕು ಎಂದು ನಿರ್ಧಾರವಾಗಿ ನಿಮ್ಮ ಮನಸ್ಸಿನಲ್ಲಿರುತ್ತದೆ ಇದು ಒತ್ತಡವನ್ನು ಕಡಿಮೆ ಮಾಡುತ್ತದೆ.
ಮುಖ್ಯವಲ್ಲದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ
ಹಗಲಿನಲ್ಲಿ ನೀವು ಕೆಲಸ ಕಾರ್ಯಗಳನ್ನು ಮಾಡುತ್ತೀರಿ, ಮನಸ್ಸು ಗೊಂದಲದಲ್ಲಿರುತ್ತೆ ಇದರಿಂದ ನಿರ್ಧಾರಗಳನ್ನು ತೆಗೆದು ಕೊಳ್ಳಲು ಶಾರ್ಟ್ ಕಟ್ ಗಳನ್ನ ಹುಡುಕುತ್ತೇವೆ. ಇದು ಕೆಲವೊಮ್ಮೆ ತಪ್ಪು ನಿರ್ಧಾರಗಳನ್ನ ತೆಗೆದುಕೊಳ್ಳಲು ದಾರಿ ಮಾಡಿಕೊಡುತ್ತವೆ.
ವ್ಯಾಯಾಮ ಮಾಡಲು ಮರೆಯಬೇಡಿ
ಬೆಳಗ್ಗಿನ 20 ನಿಮಿಷಗಳ ವ್ಯಾಯಾಮ ಇಡೀ ದಿನದ ಉತ್ಸಾಹವನ್ನು ಕಾಪಿಡುತ್ತದೆ. ಹೀಗಾಗಿ ವರ್ಕ್ಔಟ್ ಮಾಡಲು ಮರೆಯಬೇಡಿ.
ಪ್ರೋಟೀನ್ ಇರುವ ಆಹಾರ ಸೇವಿಸಿ
ಬೆಳಗ್ಗೆ 30 ಗ್ರಾಂ ಪ್ರೋಟೀನ್ ಸೇವಿಸುವುದು ಮನಸ್ಥಿತಿಯನ್ನು ಸುಧಾರಿಸುತ್ತದೆ. ಇದು ಹೊಟ್ಟೆಯನ್ನು ಫುಲ್ ಆಗಿ ಇಡುವುದರಿಂದ ಮನಸ್ಸು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ.
ಸರಿಯಾದ ಬ್ರೇಕ್ ತೆಗೆದುಕೊಳ್ಳಿ
ಪ್ರತಿ 90-120 ನಿಮಿಷಗಳ ಬಳಿಕ 15-20 ನಿಮಿಷಗಳ ಬ್ರೇಕ್ ನಿಂದ ಕೌಶಲ್ಯ ಮತ್ತು ಏಕಾಗ್ರತೆ ಹೆಚ್ಚುತ್ತದೆ.
ಇಂತಹ ಚಿಕ್ಕ ಚಿಕ್ಕ ಬದಲಾವಣೆಗಳು ನಿಮ್ಮ ದಿನವನ್ನು ಹೆಚ್ಚು ಪರಿಣಾಮಕಾರಿಯಾಗಿ ರೂಪಿಸಬಹುದು.