Friday, December 9, 2022

Latest Posts

ಫ್ಲೈ ಓವರ್ ಮೇಲೆ ಜನ್ಮದಿನ ಆಚರಣೆ, 21 ಮಂದಿ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಸಮೀಪದ ಫ್ಲೈ ಓವರ್ ಮೇಲೆ ಸದ್ದು ಮಾಡುತ್ತಾ ಹುಟ್ಟುಹಬ್ಬ ಆಚರಿಸಿದ21 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜತೆಗೆ ಎಂಟು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
21 ಮಂದಿ ಸ್ನೇಹಿತರು ಮಧ್ಯರಾತ್ರಿ ದೆಹಲಿಯ ಅಂಶ್ ಕೊಹ್ಲಿ ಜನ್ಮದಿನ ಆಚರಣೆಗೆ ಫ್ಲೈ ಓವರ್‌ನಲ್ಲಿ ಕಾರ್‌ಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಇನ್ನು ದೊಡ್ಡ ಧ್ವನಿಯಲ್ಲಿ ಮ್ಯೂಸಿಕ್ ಹಾಕಿ ಕಿರಿಕಿರಿ ಉಂಟುಮಾಡಿದ್ದಾರೆ. ಬಾನೆಟ್ ಮೇಲೆ ಕೇಕ್ ಕತ್ತರಿಸಿ, ಕೂಗಾಡುತ್ತಾ ರಸ್ತೆಯಲ್ಲಿ ಇದ್ದವರಿಗೆಲ್ಲ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!