ತಿರುಮಲದಲ್ಲಿ ಬ್ರಹ್ಮೋತ್ಸವ: ತಿಮ್ಮಪನ ತಿರುಮಂಜನಕ್ಕೆ ಜಪಾನೀಸ್ ಸೇಬು, ಮಸ್ಕತ್ ದ್ರಾಕ್ಷಿ, ಕೊರಿಯಾ ಪೇರಳೆ, ಅಮೆರಿಕನ್ ಚೆರ್ರಿಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಏಳು ಬೆಟ್ಟಗಳ ಒಡೆಯ, ಅಖಿಲ ಕೋಟಿ ಬ್ರಹ್ಮಾಂಡನಾಯಕನ ಬ್ರಹೋತ್ಸವ ಅದ್ಧೂರಿಯಾಗಿ ಪ್ರಾರಂಭವಾಗಿದೆ. ಎಲ್ಲೋ ಅರಳಿದ  ಹೂಗಳು, ಬೇರೆ ದೇಶಗಳಲ್ಲಿನ ಹಣ್ಣುಗಳು. ಕೇವಲ ಭಾರತ ಮಾತ್ರವಲ್ಲದೆ ವಿದೇಶಗಳಿಂದಲೂ ಶ್ರೀವಾರಿಗೆ ಹೂ-ಹಣ್ಣು ಬರುತ್ತಿವೆ. ರಾತ್ರಿ 7 ರಿಂದ 9 ರವರೆಗೆ ಶ್ರೀ ವೆಂಕಟೇಶ್ವರ ಸ್ವಾಮಿಯು ಹಂಸವಾಹನ ಸೇವೆಯಲ್ಲಿ ಜ್ಞಾನಮೂರ್ತಿಯಾಗಿ ಕಾಣಿಸಿಕೊಂಡು ಭಕ್ತರನ್ನು ಪುಳಕಿತರನ್ನಾಗಿಸುತ್ತಿದ್ದಾನೆ. ಹಂಸವು ಬುದ್ಧಿವಂತಿಕೆಯ ಸಂಕೇತವಾಗಿದ್ದು, ಮಲಯಪ್ಪ ಸ್ವಾಮಿಯು ಹಂಸ ವಾಹನದ ಮೇಲೆ ಪ್ರತ್ಯಕ್ಷನಾಗಿ ಭಕ್ತರ ಅಹಂಕಾರವನ್ನು ಹೋಗಲಾಡಿಸಿ ಜ್ಞಾನೋದಯವನ್ನು ನೀಡುತ್ತಾನೆ ಎಂದು ಪುರಾಣಗಳು ಹೇಳುತ್ತವೆ.

ಶ್ರೀವಾರಿ ಬ್ರಹ್ಮೋತ್ಸವದ ಅಂಗವಾಗಿ ಸ್ವಾಮಿಗೆ ತಹರೇವಾರಿ ಪುಷ್ಪಗಳು ತಿರುಮಲ ಬೆಟ್ಟವನ್ನು ತಲುಪುತ್ತಿವೆ. ಅದೇ ರೀತಿ ಜಪಾನ್‌ನಿಂದ ಸೇಬು, ಮಸ್ಕತ್‌ನಿಂದ ದ್ರಾಕ್ಷಿ, ಕೊರಿಯಾದಿಂದ ಪೇರಳೆ ಹಣ್ಣುಗಳು ತಿಮ್ಮಪ್ಪನಿಗಾಗಿ ಓಡೋಡಿ ಬಂದಿವೆ. ಕೆಲವು ಅದ್ಭುತವಾದ ವಸ್ತುಗಳನ್ನು ಅಲ್ಲಿನ ಅರ್ಚಕರು ವಿದೇಶದಿಂದ ತಿರುಮಲಕ್ಕೆ ತಂದಿದ್ದಾರೆ.

ವಿಶೇಷ ಅಲಂಕಾರಕ್ಕಾಗಿ ಟನ್ ಗಟ್ಟಲೆ ಹೂವು, ಹಣ್ಣುಗಳನ್ನು ಸ್ವಾಮಿಯ ಸನ್ನಿಧಿಗೆ ತರಲಾಯಿತು. ಶ್ರೀವಾರಿ ಕೈಂಕರ್ಯದಲ್ಲಿ ದೇಶಿ ಧಾನ್ಯ, ಹಣ್ಣು, ಹೂವು, ಸುಗಂಧ ದ್ರವ್ಯಗಳು ಹೇಗೆ ಉಪಯೋಗವಾಗಲಿದೆಯೋ ಅದೇ ರೀತಿ ಈ ಬಾರಿಯ ಬ್ರಹ್ಮೋತ್ಸವದಲ್ಲಿ ಜಪಾನ್‌ನ ಸೇಬು, ಮಸ್ಕತ್‌ನ ದ್ರಾಕ್ಷಿ, ಕೊರಿಯಾದ ಪೇರಳೆ, ಥಾಯ್ಲೆಂಡ್‌ನ ಮಾವು, ಅಮೆರಿಕದ ಚೆರ್ರಿಗಳನ್ನು ತರಲಾಗಿದೆ. ಶ್ರೀವಾರಿಯ ವಾರ್ಷಿಕ ಬ್ರಹ್ಮೋತ್ಸವದ ಎರಡನೇ ದಿನ ರಂಗನಾಯಕನ ಮಂಟಪದಲ್ಲಿ ಸ್ನಪನ ತಿರುಮಂಜನ ನಡೆಯಿತು. ವಿಶೇಷ ವೇದಿಕೆಯಲ್ಲಿ ಶ್ರೀದೇವಿ ಮತ್ತು ಭೂದೇವಿ ಸಮೇತ ಶ್ರೀ ತಿಮ್ಮಪ್ಪಸ್ವಾಮಿ ಉತ್ಸವಮೂರ್ತಿಗಳನ್ನು ಪ್ರತಿಷ್ಠಾಪಿಸಿ ಸುಗಂಧ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!