ಗನ್ನು ಹಿಡಿದ, ಪೆನ್ನು ಜಳಪಳಿಸುವ ಎರಡೂ ನಮೂನೆ ನಕ್ಸಲರ ನಾಶವಾಗಬೇಕು- ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗನ್ನು ಹಿಡಿದ ಹಾಗೂ ಪೆನ್ನು ಜಳಪಿಸುವ ಎರಡೂ ನಮೂನೆ ನಕ್ಸಲರ ನಾಶವಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರಾಜ್ಯಗಳ ಗೃಹ ಮಂತ್ರಿಗಳ ಚಿಂತನ್ ಶಿವಿರ್ ಉದ್ದೇಶಿಸಿ ವಿಡಿಯೋ ಸಂವಾದದಲ್ಲಿ ಪ್ರಧಾನಿ ಮೋದಿ ಆಂತರಿಕ ಭದ್ರತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಆಡಳಿತಕ್ಕೆ ಬಂದ ಎಲ್ಲ ಸರ್ಕಾರಗಳು ನಕ್ಸಲಿಸಂನ್ನು ಬುಡಸಮೇತ ಕಿತ್ತುಹಾಕುವಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿವೆ. ನಮ್ಮ ಎಲ್ಲ ಪಡೆಗಳನ್ನು ನಾವು ಒಗ್ಗೂಡಿಸಿ ಪರಿಸ್ಥಿತಿ ನಿಭಾಯಿಸಬೇಕಿದೆ. ಎಲ್ಲಾ ರೀತಿಯ ನಕ್ಸಲಿಸಂನ್ನು ಸೋಲಿಸುವ ಅಗತ್ಯ ಇದೆ, ಅದು ಗನ್ ಹಿಡಿದ ನಕ್ಸಲಿಸಂ ಆಗಿರಲಿ, ಪೆನ್ ಜಳಪಿಸುವ ನಕ್ಸಲಿಸಂ ಆಗಿರಲಿ ಎಲ್ಲವೂ ಕೊನೆಯಾಗಬೇಕು. ಇದಕ್ಕೆ ಪರಿಹಾರ ಹುಡುಕಲೇಬೇಕು ಎಂದಿದ್ದಾರೆ.

ಸುಳ್ಳು ಸುದ್ದಿಗಳ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಿದ್ದು, ಒಂದು ಸುಳ್ಳು ಸುದ್ದಿ ಕಾನೂನು ವ್ಯವಸ್ಥೆಗೆ ಸವಾಲು ಒಡ್ಡುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಯಾವುದೇ ವಿಷಯವನ್ನು ಸುಮ್ಮನೆ ಎಲ್ಲರಿಗೂ ಫಾರ್ವರ್ಡ್ ಮಾಡುವ ಮುನ್ನ ಅದು ನಿಜವೋ ಸುಳ್ಳೋ ಪರಿಶೀಲಿಸಿ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!