July 31, 2026
Friday, July 31, 2026
spot_img

ʼನೀವೆಲ್ಲ ಮೋದಿಯನ್ನು ಬೈತೀರಿʼ ಎಂದು ಅನ್ಯಧರ್ಮೀಯರಿಗೆ ಬ್ಲಾಂಕೆಟ್‌ ಕೊಡದ ಬಿಜೆಪಿ ನಾಯಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನೀವು ಪ್ರಧಾನಿ ಮೋದಿಯರವನ್ನು ನಿಂದಿಸುವವರು ಎಂದು ಹೇಳುತ್ತಾ ಬಿಜೆಪಿ ನಾಯಕರೊಬ್ಬರು ಮುಸ್ಲಿಂ ಮಹಿಳೆಯರಿಗೆ ಕಂಬಳಿ ನೀಡಲು ನಿರಾಕರಿಸಿದ್ದಾರೆ.

ರಾಜಸ್ಥಾನದ ಟೋಂಕ್‌ ಸವಾಯಿ ಮಾಧೋಪುರ್‌ದ ಬಿಜೆಪಿ ನಾಯಕ ಸುಖಬೀರ್‌ ಸಿಂಗ್‌ ಕಂಬಳಿ ವಿತರಿಸಲು ನಿರಾಕರಿಸಿದ್ದಾರೆ. ಪ್ರಧಾನಿ ಮೋದಿಯವರನ್ನು ನಿಂದಿಸುವವರಿಗೆ ಕಂಬಳಿಯ ಹಕ್ಕಿಲ್ಲ ಎಂದು ಸುಖಬೀರ್‌ ಸಿಂಗ್‌ ಹೇಳಿದ್ದಾರೆ.

ಮಹಿಳೆಯರಿಗೆ ಸಿಂಗ್‌ ಕಂಬಳಿ ಹಂಚುವಾಗ, ಒಬ್ಬ ಮಹಿಳೆಯ ಹೆಸರು ಹೇಳುತ್ತಾರೆ. ಆಕೆ ಮುಸ್ಲಿಂ ಹೆಸರು ಹೇಳಿದಾಗ, ಆಕೆ ಮುಸ್ಲಿಂ ಹೆಸರು ಹೇಳುತ್ತಾರೆ. ಸಿಂಗ್‌, ತನ್ನ ಸಹಾಯಕರಿಗೆ ಕಂಬಳಿ ವಾಪಸ್‌ ನೀಡುವಂತೆ ಮಹಿಳೆಗೆ ತಿಳಿಸುತ್ತಾರೆ. ನಂತರ, ‘ನನ್ನ ಮಾತು ಕೇಳಿ.. ಪ್ರಧಾನಿ ಮೋದಿಯನ್ನು ನಿಂದಿಸುವವರು ಕಂಬಳಿ ತೆಗೆದುಕೊಳ್ಳುವ ಹಕ್ಕಿಲ್ಲ’ ಎಂದು ಹೇಳಿದ್ದಾರೆ. ಈ ಸನ್ನಿವೇಶದ ವೀಡಿಯೋ ವೈರಲ್‌ ಆಗಿದೆ.

ಮುಸ್ಲಿಂ ಮಹಿಳೆಯರಿಗೆ ಕಂಬಳಿ ನಿರಾಕರಿಸಿದ್ದಕ್ಕಾಗಿ ಕೆಲವರು ಬಿಜೆಪಿ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗಂಟೆಗಟ್ಟಲೆ ಕಾದು ನಿಂತಿದ್ದ ಮಹಿಳೆಯರನ್ನು ಖಾಲಿ ಕೈಲಿ ಕಳುಹಿಸಿದ್ದಾರೆ. ಕಂಬಳಿಯನ್ನು ನನ್ನ ವೈಯಕ್ತಿಕ ಹಣದಿಂದ ನೀಡುತ್ತಿದ್ದೇನೆ, ಇದಕ್ಕೆ ಸರ್ಕಾರಿ ಹಣ ಬಳಸಿಲ್ಲ ಎಂದು ಬಿಜೆಪಿ ನಾಯಕ ಸ್ಪಷ್ಟಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !