ಪಾಕಿಸ್ತಾನದಲ್ಲೂ ಬಿಜೆಪಿ ಮಾದರಿ ಆಡಳಿತ ಬಯಸಲಾಗುತ್ತಿದೆ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ

ಹೊಸದಿಗಂತ ವರದಿ ವಿಜಯಪುರ:

ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನದಲ್ಲೂ ಬಿಜೆಪಿ ಮಾದರಿ ಆಡಳಿತ ಬಯಸುತ್ತಿದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು. ವಿಜಯಪುರ ತಾಲೂಕಿನ ನಾಗಠಾಣದಲ್ಲಿ ಸೋಮವಾರ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಅವರು ಮಾತನಾಡಿದರು.

ʻಪಾಕಿಸ್ತಾನದ ಪ್ರಜೆ ಕೂಡ ಕಮಲದ ಬಾವುಟ ಹಿಡಿದು ತನ್ನ ದೇಶದಲ್ಲಿ ಪ್ರಧಾನಿ ಮೋದಿಯ ಆಡಳಿತದ ಮಾದರಿ ಪಾಕಿಸ್ತಾನದಲ್ಲೂ ಬರಬೇಕು ಎನ್ನುತ್ತಿದ್ದಾರೆ. ಒಂದು ಕಾಲದಲ್ಲಿ ಭಾರತವನ್ನು ಬಡವರ ದೇಶ, ಹಾವಾಡಿಗರ ದೇಶ, ಭಿಕ್ಷುಕರ ದೇಶ ಎಂದು ಕರೆಯುತ್ತಿದ್ದರುʼ ಎಂದರು.

ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಬಡದೇಶ ಎಂದು ಕರೆಯುವ ಹಿರಿಯ ರಾಷ್ಟ್ರಗಳೇ ಭಾರತದ ಸಹಾಯ ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಭಾರತ ಇಂದು ಶಕ್ತಿಶಾಲಿ ರಾಷ್ಟ್ರವಾಗಿದೆ ಎಂದರು.

ಇಲ್ಲಿನ ಪ್ರಮುಖ ರಸ್ತೆಯಲ್ಲಿ ಅದ್ಧೂರಿ ರೋಡ್ ಶೋ ಹಮ್ಮಿಕೊಳ್ಳಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!