ಬಿಜೆಪಿ ಪಕ್ಷದ ಸಂಘಟನಾ ಶಕ್ತಿಯಿಂದ 2023ರಲ್ಲಿ ಬಿಜೆಪಿ ಅಧಿಕಾರಕ್ಕೆ: ಸಚಿವ ಕೋಟ ವಿಶ್ವಾಸ

ಹೊಸದಿಗಂತ ವರದಿ, ಹಾವೇರಿ: 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಈವರೆಗೆ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಪಕ್ಷದ ಸಂಘಟನಾತ್ಮಕ ಹಾಗೂ ಸೈದ್ಧಾಂತಿಕ ಹೋರಾಟ, ಮುಖ್ಯಮಂತ್ರಿಗಳ ಪರಿಶ್ರಮ, ಯಡಿಯೂರಪ್ಪನವರ ನೇತೃತ್ವ, ನಳೀನಕುಮಾರ ಕಟೀಲು ಅವರ ಸಂಘಟನಾತ್ಮಕ ಶಕ್ತಿಯಿಂದ 2023 ರಲ್ಲಿ ಭಾರತೀಯ ಜನತಾ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ರಾಜಕೀಯ ಪಕ್ಷವಾಗಿ ಪಜಾ, ಪಪಂ, ಹಿಂದುಳಿದವರು, ಫಲಾನುಭವಿಗಳು ಪಕ್ಷದ ಸಂಘಟನಾತ್ಮಕ ವಿಚಾರಗಳಿಗೆ ಸಂಬಂಧಿಸಿದಂತೆ ಈ ಹಿಂದೆಯೂ ಪಕ್ಷದ ವತಿಯಿಂದ ರಾಜ್ಯ ಮತ್ತು ದೇಶಕ್ಕೆ ಮಾದರೀ ಆಗುವಮತಹ ಸಮಾವೇಶಗಳನ್ನು ಮಾಡುತ್ತ ಬರಲಾಗಿದೆ. ಕಾಲ ಕಾಲಕ್ಕೆ ಅನುಗುಣವಾಗಿ ಸಂಘಟನೆ ದೃಷ್ಠಿಯಿಂದ ಸಮಾವೇಶಗಳನ್ನು ಪಕ್ಷ ಆಯೋಜಿಸುತ್ತಿದೆಯೇ ವಿನಃ ಸಿದ್ದರಾಮಯ್ಯ ಅವರ ಉತ್ಸವ ಆಗಿದೆ ಎಂಬ ವಿಚಾರಕ್ಕೆ ಪಕ್ಷ ಸಮಾವೇಶಗಳನ್ನು ಮಾಡುವುದಿಲ್ಲ ಎಂದು ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರೀಯೆ ನೀಡಿದರು.
ಎಲ್ಲ ರಾಜಕೀಯ ಪಕ್ಷಗಳು ಸಮಾವೇಶಗಳನ್ನು ಮಾಡಿದ ನಂತರ ಇತರೆ ಪಕ್ಷಗಳಿಗೆ ತೊಂದರೆ ಆಗುತ್ತದೆ ಎಂದು ಹೇಳುತ್ತವೆ ಆದರೆ 2023ರ ಚುನಾವಣೆಯಲ್ಲಿ ನಿಶ್ಚಿತವಾಗಿ ಬಾರತೀಯ ಜನತಾ ಪಕ್ಷವೇ ಗೆಲ್ಲುತ್ತದೆ. ಭಾರತೀಯ ಜನತಾಪಕ್ಷ ಸಂಘಟನೆ ಮತ್ತು ಅಭಿವೃದ್ಧಿ ಹಿನ್ನಲೆಯನ್ನಿಟ್ಟುಕೊಂಡು 2023ರ ಚುನಾವಣೆಯನ್ನು ಎದುರಿಸಲಿದೆ ಮತ್ತು ಗೆಲ್ಲಲಿದ್ದೇವೆ ಎಂಬ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರ ಉತ್ಸವಕ್ಕೂ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ. ಸಿದ್ದರಾಮಯ್ಯ ಅವರು 75 ವರ್ಷ ತಮಗಾಗಿದೆ ಎಂದು ಹೇಳಿ ಒಂದು ಖಾಸಗಿ ಉತ್ಸವವನ್ನು ಆಯೋಜನೆ ಮಾಡಿದ್ದಾರೆ ವಿನಃ ಇದರಿಂದ 2023ರ ಚುಣಾವಣೆಯಲ್ಲಿ ಬಿಜೆಪಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
ಸಿದ್ದರಾಮಯ್ಯ ಅವರು ಹುಟ್ಟುಹಬ್ಬದ ನೆಪದಲ್ಲಿ ಒಂದು ರಾಜಕೀಯ ಸಮಾವೇಶ ಮಾಡಿದ್ದಾರೆ. ಅದು ಅಷ್ಟಕ್ಕೆ ಮಾತ್ರ ಸೀಮಿತ ಅದರಾಚೆ ಬಾರತೀಯ ಜನತಾ ಪಕ್ಷ ಜನಪರ ಕೆಲಸಗಳನ್ನು ಮಾಡುವ ಮೂಲಕ ಹೋರಾಟದಿಂದ ಬಂದ ರಾಜಕೀಯ ಸಂಘಟನೆ ಈ ಹಿನ್ನಲೆಯಲ್ಲಿ ಈ ಸಮಾವೇಶಕ್ಕೂ ರಾಜಕೀಯ ಬದಲಾವಣೆಗಳಿಗೆ ಸಂಬಂಧವಿಲ್ಲ. ಸಮಾವೇಶಗಳು ಸಮಾವೇಶಗಳಾಗಿರುತ್ತವೆ ಅಷ್ಟೆ. ಯಾವುದೇ ಸಮಾವೇಶಗಳು ರಾಜಕೀಯ ತೀರ್ಮಾನವನ್ನು ಮಾಡುವುದಿಲ್ಲ. ರಾಜಕೀಯ ನಿರ್ಧಾರ ರಾಜಕೀಯ ನಿರ್ಧಾರವಾಗಿರುತ್ತದೆ ಎಂದರು.
ಪಕ್ಷದ ಸರ್ವೋಚ್ಛ ನಾಯಕರಲ್ಲಿ ಒಬ್ಬರಾದ ಅಮಿತ್ ಶಾ ಅವರು ಪಕ್ಷದ ಸಂಘಟನೆ ದೃಷ್ಠಿಯಿಂದ ಸಲಹೆ ಸೂಚನೆಗಳನ್ನು ನೀಡುವುದು ಸಹಜ ಅವನ್ನೆಲ್ಲ ಬೇರೆ ಅರ್ಥದಲ್ಲಿ ಅರ್ಥೈಸುವುದು ಸರಿಯಲ್ಲ. 2023ರ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಲಿದೆ ಎಂದು ತಿಳಿಸಿದರು.
ಬಿಜೆಪಿಯಲ್ಲಿ ಯಡಿಯೂರಪ್ಪ ಅವರು ಪ್ರಶ್ನಾತೀತ ನಾಯಕರು ಅವರು ನಮ್ಮ ಮಾರ್ಗದರ್ಶಕರು. ಅವರು ಶಿಕಾರಿಪುರ ಕ್ಷೇತ್ರವನ್ನು ಬಿಟ್ಟು ಕೊಡುತ್ತೇನೆ ಎಂದು ಹೇಳಿದ ಕೂಡಲೆ ಅವರ ಉತ್ತರಾಧಿಕಾರಿ ಕುರಿತು ಚರ್ಚಿಸುವ ಪ್ರಶ್ನೆ ಬರುವುದಿಲ್ಲ. ರಾಜ್ಯ ಉಪಾಧ್ಯಕ್ಷರಾದ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಸೇರಿದಂತೆ ಎಲ್ಲರೂ ಯಡಿಯೂರಪ್ಪ ಅವರಿಗೆ ಕಾರ್ಯಕರ್ತರೆ. ಸಂಘಟನೆಯಲ್ಲಿ ತೊಡಗಿಕೊಂಡಿರುವ ಸಂದರ್ಭದಲ್ಲಿ ಯಡಿಯೂರಪ್ಪ ಅವರ ನೀಡಿರುವ ಸಲಹೆ ಸೂಚನೆಗಳ ಪಡೆದುಕೊಂಡು ಮುನ್ನಡೆಯುತ್ತೇವೆ ಎಂದರು.
ಈ ಸಂದರ್ಭ  ಶಾಸಕ ನೆಹರು ಓಲೇಕಾರ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!