ಬಿಜೆಪಿ, ಆರ್‌ಎಸ್‌ಎಸ್ ದೇಶದಲ್ಲಿ ದ್ವೇಷ ಹರಡುತ್ತಿದೆ: ತೆಲಂಗಾಣದಲ್ಲಿ ರಾಹುಲ್ ಹೇಳಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಿಜೆಪಿ ಮತ್ತು ಆರೆಸ್ಸೆಸ್ ದೇಶದಲ್ಲಿ ದ್ವೇಷವನ್ನು ಹರಡುತ್ತಿವೆ. ಭಾರತ್ ಜೋಡೋ ಯಾತ್ರೆಯು ಸೌಹಾರ್ದತೆ ಮತ್ತು ಸಹೋದರತ್ವವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾನುವಾರ ಹೇಳಿದ್ದಾರೆ.

ಕರ್ನಾಟಕದಲ್ಲಿ ಪೂರ್ಣಗೊಂಡು ತೆಲಂಗಾಣಕ್ಕೆ ತಲುಪಿರುವ ಕಾಂಗ್ರೆಸ್‌ ನ ಭಾರತ್‌ ಜೋಡೋ ಯಾತ್ರೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಭಾರತ್‌ ಜೋಡೊ ಕಾಲ್ನಡಿಗೆ ಯಾತ್ರೆಯು ಬೆಲೆ ಏರಿಕೆ ಮತ್ತು ನಿರುದ್ಯೋಗದ ಸಮಸ್ಯೆಗಳನ್ನು ಸಹ ಪ್ರಸ್ತಾಪಿಸುತ್ತದೆ ಎಂದು ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆಯು ಬಿಜೆಪಿ-ಆರ್‌ಎಸ್‌ಎಸ್ ನ ದ್ವೇಷ ಮತ್ತು ಹಿಂಸಾಚಾರದ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಎರಡು ಭಾರತಗಳು ಇಂದು ಅಸ್ತಿತ್ವದಲ್ಲಿವೆ ಒಂದು ಆಯ್ದ ಕೆಲವು ಮತ್ತು ಶ್ರೀಮಂತರಿಗೆ ಸೇರಿದ್ದು, ಇನ್ನೊಂದು ಲಕ್ಷಗಟ್ಟಲೆ ಯುವಕರು, ರೈತರು, ಕಾರ್ಮಿಕರು ಮತ್ತು ಸಣ್ಣ ಉದ್ಯಮಿಗಳಿಗೆ ಸೇರಿದೆ ಎಂದು ಅವರು ಆರೋಪಿಸಿದ್ದಾರೆ.

“ನಮಗೆ ಎರಡು ಭಾರತ ಬೇಡ. ನಮಗೆ ಒಂದೇ ಭಾರತ ಬೇಕು ಮತ್ತು ಎಲ್ಲರಿಗೂ ನ್ಯಾಯ, ಉದ್ಯೋಗ ಸಿಗಬೇಕು. ದೇಶದಲ್ಲಿ ಭ್ರಾತೃತ್ವ ಇರಬೇಕು” ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!