ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ಸಿಗ್ತಿದೆ ಭರಪೂರ ಬೆಂಬಲ: ಸಚಿವ ಅಶ್ವತ್ಥನಾರಾಯಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ರಾಜ್ಯದ ಜನ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಇದುವೆರಗೂ ಒಟ್ಟು 40,50,351 ಸದಸ್ಯತ್ವ ನೋಂದಣಿ ಮಾಡಿದ್ದೇವೆ ಎಂದು ರಾಜ್ಯದ ಉನ್ನತ ಶಿಕ್ಷಣ, ಐಟಿ & ಬಿಟಿ ಸಚಿವ ಹಾಗೂ ಅಭಿಯಾನದ ಸಂಚಾಲಕ ಸಿ.ಎನ್. ಅಶ್ವತ್ಥನಾರಾಯಣ್ ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿಯಾನದಲ್ಲಿ 58,186 ಬೂತ್ ಪೈಕಿ 39,572 ಬೂತ್‍ಗಳ ಸಂಪರ್ಕ ಮಾಡಲಾಗಿದೆ. 22,55,562 ಮನೆಗಳ ಸಂಪರ್ಕ ಮಾಡಿದ್ದೇವೆ. 13,35,254 ಮನೆಗಳ ಮೇಲೆ ಸ್ಟಿಕರ್ ಅಂಟಿಸಲಾಗಿದೆ. 4,91,067 ವಾಹನಗಳ ಮೇಲೆ ಸ್ಟಿಕರ್ ಅಂಟಿಸಲಾಗಿದೆ. 1.94 ಲಕ್ಷ ಗೋಡೆ ಬರಹ ಮಾಡಲಾಗಿದೆ. 31,260 ಬೂತ್‍ಗಳಲ್ಲಿ ಮನ್ ಕಿ ಬಾತ್ ಅನ್ನು 5 ಲಕ್ಷ ಜನರು ಆಲಿಸಿದ್ದಾರೆ. ಅಲ್ಲದೆ, 32,489 ಡಿಜಿಟಲ್ ವಾಲ್ ಪೈಂಟಿಂಗ್ ಮಾಡಲಾಗಿದೆ ಎಂದು ವಿವರಿಸಿದರು.

ಬಿಜೆಪಿಯೇ ಭರವಸೆ ಎಂಬ ಅಭಿಯಾನ ಇದಾಗಿತ್ತು. ಕನಿಷ್ಠ 150 ಶಾಸಕರನ್ನು ಗೆಲ್ಲಲು ಇದು ಪೂರಕ. ಸಶಕ್ತ ಬೂತ್ ಮೂಲಕ ಬೂತ್ ವಿಜಯ ಅಭಿಯಾನ ನಡೆದಿದೆ. ಜನರ ಸಹಕಾರ, ಬೆಂಬಲ ಕೋರಿದ್ದೇವೆ ಎಂದು ತಿಳಿಸಿದರು. ತಾವು, ಪಕ್ಷದ ಪದಾಧಿಕಾರಿಗಳು ತಮ್ಮ ಜವಾಬ್ದಾರಿಗೆ ಅನುಗುಣವಾಗಿ ಭಾಗವಹಿಸಿದ್ದಾಗಿ ತಿಳಿಸಿದರು. ವಿಜಯ ಸಂಕಲ್ಪ ಅಭಿಯಾನವು ಪೂರ್ಣಗೊಂಡಿದ್ದು, ಮನೆಮನೆ ತಲುಪುವ ನಿಟ್ಟಿನಲ್ಲಿ ಅದನ್ನು ಹಮ್ಮಿಕೊಳ್ಳಲಾಗಿತ್ತು. ಕೇಂದ್ರ- ರಾಜ್ಯ ಸರಕಾರಗಳ ಸಾಧನೆ ತಿಳಿಸುವುದು, ಗೋಡೆ ಬರಹ, ಕರಪತ್ರ ಹಂಚುವುದು, ಪಕ್ಷದ ಸದಸ್ಯತ್ವ ನೋಂದಣಿ ನಡೆದಿದೆ ಎಂದರು. 2 ಕೋಟಿ ಮನೆ, 1 ಕೋಟಿ ಸದಸ್ಯತ್ವ ನೋಂದಣಿ ಗುರಿ ಇತ್ತು ಎಂದು ವಿವರಿಸಿದರು.

ಮುಖ್ಯಮಂತ್ರಿ, ರಾಜ್ಯಾಧ್ಯಕ್ಷರ ನಾಯಕತ್ವ ಮತ್ತು ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಚುನಾವಣೆಗೆ ಹೋಗಲಿದ್ದೇವೆ. ಜಾತಿ- ಧರ್ಮ ಮೀರಿದ ಪಕ್ಷ ನಮ್ಮದು. ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಮತ್ತು ಕೀಳುಮಟ್ಟದ ರಾಜಕೀಯ ಖಂಡನೀಯ ಅವರು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!