ಬಿಜೆಪಿ 120-125 ಸ್ಥಾನ ಗೆಲುವು, ಸ್ವಂತ ಬಲದಲ್ಲೆ ಸರ್ಕಾರ ರಚನೆ : ಕರಂದ್ಲಾಜೆ ವಿಶ್ವಾಸ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 120 ರಿಂದ 125 ಸ್ಥಾನ ಗೆದ್ದು, ಸ್ವಂತ ಬಲದಲ್ಲಿ ಸರ್ಕಾರ ರಚನೆ ಮಾಡುವುದಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಎಕ್ಸಿಟ್ ಪೋಲ್ ಸುಳ್ಳು ಮಾಡುತ್ತಾರೆಂದು ನಾನು ಮೊದಲೇ ಹೇಳಿದ್ದೆ. ಈಗಲೂ ನನಗೆ ಅದೇ ವಿಶ್ವಾಸವಿದೆ ಎಂದರು.

ಬಿ.ಎಸ್. ಯಡಿಯೂರಪ್ಪ ಅವರ ವರದಿ ಯಾವತ್ತೂ ಸುಳ್ಳಾಗಲ್ಲ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದರು.

ಬೆಂಗಳೂರಿನಲ್ಲಿ ಶೇ.53% ಮತದಾನ ಆಗಿದ್ದು ಬೇಸರದ ಸಂಗತಿಯಾಗಿದೆ. ರಾಜ್ಯ ಸರ್ಕಾರ ರಜೆ ಘೋಷಣೆ ಮಾಡಿದ್ದರೂ ಮತ ಹಾಕಿಲ್ಲ. ಮುಂದೆ ಆದರೂ ಬೆಂಗಳೂರು ಜನ ಮತ ಹಾಕಲು ಬರಲಿ ಎಂಬುದಾಗಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!