ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಪತನ : ಮೂವರು ತಾಲಿಬಾನಿಗಳ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಾಲಿಬಾನ್ ಭದ್ರತಾ ಪಡೆಗಳು ತರಬೇತಿಗೆ ಬಳಸುತ್ತಿದ್ದ ಅಮೆರಿಕ ಸೇನೆ ಬಿಟ್ಟು ಹೋಗಿದ್ದ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಪತನವಾಗಿದೆ.
ಕಾಬೂಲ್‌ನ ಡಿಫೆನ್ಸ್ ಯುನಿವರ್ಸಿಟಿ ವ್ಯಾಪ್ತಿಯಲ್ಲಿ ಹೆಲಿಕಾಪ್ಟರ್ ಪತನವಾಗಿದ್ದು, ಮೂವರು ಪೈಲೆಟ್‌ಗಳು ಮೃತಪಟ್ಟಿದ್ದಾರೆ.
ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅತ್ಯಾಧುನಿಕ ವಾಹನಗಳನ್ನು ಕಳೆದ ವರ್ಷ ಅಫ್ಘಾನಿಸ್ತಾನ ತೊರೆದು ಹೋಗುವಾಗ ಅಮೆರಿಕ ಬಿಟ್ಟು ಹೋಗಿತ್ತು. ಇದರಲ್ಲಿ ಬ್ಲ್ಯಾಕ್ ಹಾಕ್ ವಿಮಾನ ಸೇರಿತ್ತು.
ತರಬೇತಿ ಪಡೆಯುತ್ತಿದ್ದ ವೇಳೆ ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಪತನವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!