ಗ್ಯಾಂಗ್‌ ಸ್ಟರ್‌ಗಳಿಗೆ ನಡುಕ ಹುಟ್ಟಿಸಿದ NIA: ಒಂದೇ ದಿನ ದೇಶದ 60 ಸ್ಥಳಗಳಲ್ಲಿ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಗ್ಯಾಂಗ್‌ ಸ್ಟರ್‌ ಗಳ ಚಟುವಟಿಕೆಗಳು ಮತ್ತು ಅಪರಾಧ ಸಿಂಡಿಕೇಟ್‌ಗಳನ್ನು ಹತ್ತಿಕ್ಕಲು ಬಿಗಿ ಕ್ರಮ ಕೈಗೊಂಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ಭಾರತದಾದ್ಯಂತ 60 ಸ್ಥಳಗಳಲ್ಲಿ ದಾಳಿ ನಡೆಸಿದೆ.
ಈ 60 ಸ್ಥಳಗಳಲ್ಲಿ ದೆಹಲಿ, ರಾಷ್ಟ್ರೀಯ ರಾಜಧಾನಿ ಪ್ರದೇಶ, ಹರಿಯಾಣ, ಉತ್ತರ ಪ್ರದೇಶ ಮತ್ತು ಪಂಜಾಬ್‌ನ ಸ್ಥಳಗಳು ಸೇರಿವೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ಬಾಂಬಿಹಾ ಗ್ಯಾಂಗ್ ಮತ್ತು ನೀರಜ್ ಬವಾನಾ ಗ್ಯಾಂಗ್‌ಗೆ ಸೇರಿದ 10 ದರೋಡೆಕೋರರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ದೆಹಲಿ ಪೊಲೀಸ್ ವಿಶೇಷ ಕೋಶವು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ ನಂತರ ಎನ್‌ಐಎ ತನಿಖೆ ನಡೆಸುತ್ತಿದೆ. ಈ ನಡುವೆ ಗ್ಯಾಂಗ್‌ ಸ್ಟರ್‌ ಚಟುವಟಿಕೆಗಳನ್ನು ಮಟ್ಟ ಹಾಕಲು ಎನ್‌ಐಎ ವಿಶೇಷ ಕ್ರಮಕ್ಕೆ ಮುಂದಾಗಿದೆ.
ಸಿಧು ಮೂಸ್ ವಾಲಾ ಹತ್ಯೆ ಪ್ರಕರಣದಲ್ಲಿ ಬಂಧಿತ ದರೋಡೆಕೋರರು ಹಾಗೂ ಭಯೋತ್ಪಾದಕ ಗುಂಪುಗಳ ನಡುವೆ ಬಲವಾದ ಸಂಬಂಧವಿದೆ ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ಹೇಳಿದ ಒಂದು ದಿನದ ಬಳಿಕ  ಅಧಿಕಾರಿಗಳು ದೇಶಾದ ವಿವಿಧ ಭಾಗಗಳಲ್ಲಿ ದೊಡ್ಡ ದಾಳಿಗಳನ್ನು ನಡೆಸಿದ್ದಾರೆ. ಪಾಕಿಸ್ತಾನದ ಭಯೋತ್ಪಾದಕ ಸಂಸ್ಥೆಗಳು ಭಾರತದ ಗ್ಯಾಂಗ್‌ ಸ್ಟರ್‌ ಗಳ ಜೊತೆಗೆ ಸಂಬಂಧವನ್ನು ಬಳಸಿಕೊಳ್ಳುತ್ತಿವೆ ಎಂದು ಡಿಜಿಪಿ ಹೇಳಿದ್ದರು. NIA ವರದಿಯ ಪ್ರಕಾರ, ನೀರಜ್ ಸೆಹ್ರಾವತ್ ಅಲಿಯಾಸ್ ನೀರಜ್ ಬವಾನಾ ಮತ್ತು ಆತನ ಗ್ಯಾಂಗ್ ಪ್ರಸಿದ್ಧ ವ್ಯಕ್ತಿಗಳ ಹತ್ಯೆಗೆ ಉದ್ದೇಶಿಸಿತ್ತು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಭಯೋತ್ಪಾದನೆಯನ್ನು ಹರಡುತ್ತಿದೆ. ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ ಎಂದು ನಂಬಲಾದ ಖಲಿಸ್ತಾನಿ ಭಯೋತ್ಪಾದಕ ಹರ್ವಿಂದರ್ ಸಿಂಗ್ ರಿಂಡಾ ಜೊತೆಗೆ ಸಿಧು ಹಂತಕ ಗ್ಯಾಂಗ್‌ ನ ಲಾರೆನ್ಸ್ ಬಿಷ್ಣೋಯ್ ಸಂಬಂಧ ನಿಕಟವಾಗಿದೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!